July 13, 2024

Bhavana Tv

Its Your Channel

10 ದಿನಗಳಲ್ಲಿ ನೇಕಾರರ ಸಮಸ್ಯೆಗಳಿಗೆ ಪರಿಹಾರ, ಸಚಿವ ಶ್ರೀರಾಮುಲು ಭರವಸೆ

ಬೆಳಗಾವಿ: ನೇಕಾರರ ಹಕ್ಕೊತ್ತಾಯಗಳ ಜಾರಿಗಾಗಿ ಬೆಳಗಾವಿಯ ಬಸವೇಶ್ವರ ವೃತ್ತದಿಂದ ಸುವರ್ಣ ಸೌಧದ ವರೆಗೆ ಬೃಹತ್ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಜಿ, ರವೀಂದ್ರ ಕಲಬುರ್ಗಿ, ಮುರುಗೇಶ ಕಡ್ಲಿಮಟ್ಟಿ, ಎಸ್.ಜಿ. ನಂಜಯ್ಯನಮಠ, ಬಸವರಾಜ ಕುಂಬಳಾವತಿ, ರಮೇಶ ಜಮಖಂಡಿ, ವಿಜಯಕುಮಾರ ಭಾಪ್ರಿ ಸೇರಿದಂತೆ ಸಾವಿರಾರು ನೇಕಾರರು ಪಾಲ್ಗೊಂಡಿದ್ದರು. ಧರಣಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವೆ ಉಮಾಶ್ರೀ ಭಾಗವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ 10ದಿನಗಳಲ್ಲಿ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಧರಣಿ ಸತ್ಯಾಗ್ರಹವನ್ನು ಹಿಂಪಡೆದರು

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: