December 22, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಿದ ಬಾರಿ ಮಳೆಗೆ ಕೆರೆಯಂತಾದ ಮೈಸೂರು ಊಟಿ ರಸ್ತೆ

ಗುಂಡ್ಲಪೇಟೆ ; ಗುಂಡ್ಲುಪೇಟೆ ಪಟ್ಟಣದಲ್ಲಿ ಸುರಿದ ಬಾರಿ ಮಳೆಗೆ ಕೆರೆಯಂತಾದ ಮೈಸೂರು ಊಟಿ ರಸ್ತೆ…ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಹರಿಯುತ್ತಿರೋ ಮಳೆ ನೀರು..

ಪಟ್ಟಣದ ಊಟಿ ವೃತ್ತ, ಆರ್ಟಿಓ, ಎಪಿಎಂಸಿ ತನಿಖಾ ಕಛೇರಿ ಮುಂಭಾಗ ಅಕ್ಷರಶಃ ಕೆರೆಯಂತಾಗಿದ್ದು ಮಳೆ ನೀರು ಶೇಖರಣೆಯಾಗಿವೆ, ಮಳೆ ಹೊಡೆತಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ, ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಒಳಗೆ ನೀರು ಶೇಖರಣೆ ಯಾಗಿ ಕೆರೆಯಂತಾಗಿದೆ, .ರಾಷ್ಟ್ರೀಯ ಹೆದ್ದಾರಿ ಎರಡು ಬದಿಯಲ್ಲಿ ಸಮರ್ಪಕ ಒಳಚರಂಡಿ ನಿರ್ಮಾಣ ಮಾಡದಿರುವುದೇ ಅವ್ಯವಸ್ಥೆಗೆ ಕಾರಣವಾಗಿದೆ, ಪಟ್ಟಣದ ಪ್ರವಾಸಿ ಮಂದಿರ, ಮಡಹಳ್ಳಿ ವೃತ್ತದ ಬಳಿ ಕೆರೆಯ ಮಾದರಿಯಲ್ಲಿ ಮಳೆ ನೀರು ಶೇಖರಣೆಗೊಂಡಿದೆ, ಪಟ್ಟಣದ ಮುಖ್ಯ ರಸ್ತೆ ಪ್ರತಿಬಾರಿ ಮಳೆ ಸಂಧರ್ಭದಲ್ಲಿ ಅದ್ವಾನವಾಗುತ್ತಿದೆ, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ತೆರಿಗೆ ಹಣ ನೀರುಪಾಲಾಗುತ್ತಿದ್ದು ಗುಣಮಟ್ಟದ ಒಳಚರಂಡಿ ಕಾಮಗಾರಿ ಮಾಡದಿರುವುದೇ ಪ್ರಮುಖ ಕಾರಣ ಎನ್ನುತ್ತಿದ್ದಾರೆ ಸಾರ್ವಜನಿಕರು.

ವರದಿ ; ಸದಾನಂದ ಕನ್ನೇಗಾಲ, ಗುಂಡ್ಲಪೇಟೆ

error: