May 18, 2024

Bhavana Tv

Its Your Channel

ಡಾ.ಗವಿಸ್ವಾಮಿ ರವರ ಪ್ರಾಣಿಗಳೇ ಗುಣದಲಿ ಮೇಲು ಕೃತಿ ಲೋಕಾರ್ಪಣೆ

ಗುಂಡ್ಲುಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇವರ ನೇತೃತ್ವದಲ್ಲಿ ಪಶುವೈದ್ಯರಾದ ಡಾ.ಗವಿಸ್ವಾಮಿ ರವರ ಪ್ರಾಣಿಗಳೇ ಗುಣದಲಿ ಮೇಲು ಕೃತಿ ಲೋಕಾರ್ಪಣೆ.

ಗುಂಡ್ಲುಪೇಟೆ : ಗುರುಭವನದಲ್ಲಿ ನಡೆದ ಪ್ರಾಣಿಗಳೇ ಗುಣದಲಿ ಮೇಲು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೂ ದೀಪ ಬೆಳಗುವುದರ ಮುಖಾಂತರ ನಡೆಯಿತು. ಶ್ರೀ ಮೊರಬದ ಮಲ್ಲಿಕಾರ್ಜುನ್ ಸಾಹಿತಿಗಳು ಮಾತನಾಡಿ ವೃತ್ತಿಯಲ್ಲಿ ಪಶುವೈದ್ಯರು ಆಗಿದ್ದು ಪ್ರವೃತ್ತಿಯಲ್ಲಿ ಅವರು ಸಾಹಿತಿಗಳಾಗಿ ಸಮಾಜಕ್ಕೆ ಪರಿಚಿತನಾಗಿ ಡಾ. ಗವಿಸ್ವಾಮಿರವರು ಬರೆದಿರುವ ಪುಸ್ತಕ ಪ್ರಾಣಿಗಳನ್ನ ಉದ್ದೇಶಿಸಿ ತಮ್ಮ ಕೃತಿಯನ್ನು ಪುಸ್ತಕದಲ್ಲಿ ರಚಿಸಿದ್ದಾರೆ ಆಕೃತಿ ಬಹಳಷ್ಟು ಅರ್ಥಪೂರ್ಣವಾಗಿದೆ ಎಂದರು.

ಡಾಕ್ಟರ್ ಮಹೇಂದ್ರ ಮೂರ್ತಿ ಮಾತನಾಡಿ ಗವಿಸ್ವಾಮಿ ಅವರು ಬರೆದಿರುವ ಪುಸ್ತಕದ ಕಥೆ ಬಹಳಷ್ಟು ವಿಶಿಷ್ಟವಾಗಿದೆ ಅದು ಸಾಮಾಜಿಕ ಜೀವನದಲ್ಲಿ ಬಹಳಷ್ಟು ಕಲಿಸುತ್ತದೆ ನಮಗೆ ಅಲ್ಲದೆ ಒಬ್ಬ ಕತೆಗಾರನಿಗೆ ಸೂಕ್ಷ್ಮತೆ ಇರಬೇಕು ಎನ್ನುವ ಮೂಲಕ ಪುಸ್ತಕ ಪ್ರೇಮಿಗಳಿಗೆ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶೈಲ ಕುಮಾರ್ ಮಾತನಾಡಿ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಛಾಪು ಮೂಡಿಸುವ ಹಾಗೆ ಡಾ.ಗವಿಸ್ವಾಮಿ ಅವರು ಪ್ರಾಣಿಗಳನ್ನು ಉದ್ದೇಶಿಸಿ ತಮ್ಮ ಪುಸ್ತಕದ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ ಹಾಗಾಗಿ ಎಲ್ಲಾ ಸಾಹಿತಿಗಳು ಸಾಹಿತ್ಯವನ್ನು ಪುಸ್ತಕದಲ್ಲಿ ಪ್ರಾಣಿಗಳ ಮೂಲಕ ರಚಿಸಿದ್ದಾರೆ. ಡಾ.ಗವಿ ಸ್ವಾಮಿರವರು ಸಮಾಜಕ್ಕೆ ತಮ್ಮ ಕೊಡುಗೆಯನ್ನು ವೃತ್ತಿಯಲ್ಲಿ ಮತ್ತು ಪ್ರವೃತ್ತಿಯಲ್ಲಿ ನೀಡಿದ್ದಾರೆ ಎಂದರು

ಈ ಸಂದರ್ಭದಲ್ಲಿ ಡಾಕ್ಟರ್ ಮಹೇಂದ್ರ ಮೂರ್ತಿ, ಮೊರಬದ ಮಲ್ಲಿಕಾರ್ಜುನ್ ಸಾಹಿತಿಗಳು, ಗಣೇಶ ಅಮೀನಗಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ ಶೈಲಾಕುಮಾರ್ , ತಾಲೂಕು ಅಧ್ಯಕ್ಷರಾದ ಬಿಟಿ ಜಗತ್ ಪ್ರಕಾಶ್, ಡಾಕ್ಟರ್ ಗವಿಸ್ವಾಮಿ ಎಸ್, ಕಾವಲುಪಡೆಯ ಅಬ್ದುಲ್ ಮಾಲಿಕ್ ಮತ್ತು ಸಂಘಟನೆಯರು, ಶುಭಾಷ್ ಮಾಡ್ರಳ್ಳಿ, ಗವಿಸ್ವಾಮಿ ಪತ್ರಕರ್ತರು, ಮಹೇಶ್ ಇನ್ನು ಮುಂತಾದ ಕನ್ನಡದ ಪುಸ್ತಕ ಪ್ರೇಮಿಗಳು ಹಾಜರಿದ್ದರು.

ವರದಿ; ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: