May 18, 2024

Bhavana Tv

Its Your Channel

ಗುಂಡ್ಲುಪೇಟೆ ತಾಲ್ಲೂಕು ಗಾರೆ ಕೆಲಸ ಮತ್ತು ಕೂಲಿ ಕಾರ್ಮಿಕರ ಸಹಕಾರ ಸಂಘದ ವತಿಯಿಂದ ಅದ್ದೂರಿಯಾಗಿ ಕಾರ್ಮಿಕ ದಿನಾಚರಣೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಮಡಹಳ್ಳಿ ರಸ್ತೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಗುಂಡ್ಲುಪೇಟೆ ತಾಲ್ಲೂಕು ಗಾರೆ ಕೆಲಸ ಮತ್ತು ಕೂಲಿ ಕಾರ್ಮಿಕರ ಸಹಕಾರ ಸಂಘದ ವತಿಯಿಂದ ಅದ್ದೂರಿಯಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ,

ಗುಂಡ್ಲುಪೇಟೆ : ಕೂಲಿ ಕಾರ್ಮಿಕರ ಸಂಘ ಅಧ್ಯಕ್ಷ ರಾದ ಚಿಕ್ಕಣ್ಣ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪಟ್ಟಣದ ೬ ಮಂದಿ ನಿವೃತ್ತಿ ಕಾರ್ಮಿಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು,

ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕೂಲಿ ಮೂರು ಮಂದಿ ಕಾರ್ಮಿಕರ ಮಕ್ಕಳ ಮದುವೆಗೆ ೫೦ ಸಾವಿರ ರೂ ಸಹಾಯ ಧನ ಹಾಗೂ ಎಲೆಕ್ಟ್ರಿಕ್ ಕೆಲಸ ಮಾಡುವ ೫ ಮಂದಿ ಕೂಲಿ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣೆ ಮಾಡಲಾಯಿತು ,

ನಂತರ ಮಾತನಾಡಿದ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ನಾರಾಯಣ ಮೂರ್ತಿ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿದ ಕೂಲಿ ಕಾರ್ಮಿಕರಿಗೆ ಸರ್ಕಾರ ಹಲವು ಯೋಜನೆ ಗಳನ್ನು ಅನುಷ್ಠಾನ ಗೊಳಿಸಿದ್ದು , ಅಕಾಲಿಕ ಮರಣಕ್ಕೆ ತುತ್ತಾಗಿ ಕೂಲಿ ಕಾರ್ಮಿಕರು ಮೃತಪಟ್ಟ ರೇ ಎರಡು ಲಕ್ಷರೂ ಸಹಾಯ ಧನ ಹಾಗೂ ನಿವೃತ್ತಿ ಹೊಂದಿದ ನಂತರ ಪಿಂಚಣಿ ಸೌಲಭ್ಯ ಸೇರಿದಂತೆ ಕೂಲಿ ಕಾರ್ಮಿಕ ಮಕ್ಕಳ ಮದುವೆಗೆ ೫೦ ಸಾವಿರ ರೂ ಸಹಾಯ ಧನ, ಹಾಗೂ ವಿವಿಧ ಕೂಲಿ ಕಾರ್ಮಿಕರ ಕೆಲಸಕ್ಕೆ ತಕ್ಕಂತೆ ಕಾರ್ಮಿಕರಿಗೆ ಟೂಲ್ಸ್ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ, ರಾಜ್ಯ ಸರ್ಕಾರ ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರತಿಯೊಬ್ಬ ಕೂಲಿ ಕಾರ್ಮಿಕರು ಕಾರ್ಮಿಕ ಇಲಾಖೆಗೆ ನೊಂದಣಿ ಆಗಬೇಕು ಎಂದು ಕರೆ ನೀಡಿದರು ,

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಎಸ್.ಪುಟ್ಟಸ್ವಾಮಿ, ಕೆ.ಇ.ಬಿ.ಕೃಷ್ಣಪ್ಪ , ಗುರುರಾಜು, ರಾಜೀವ, ಹುಚ್ಚಪ್ಪ, ಶಿವಣ್ಣ , ಎಲ್.ಎನ್.ಟಿ.ರಾಜಣ್ಣ , ಸತೀಶ್, ಕರಿಯಪ್ಪ, ಸೇರಿದಂತೆ ಕಾರ್ಮಿಕ ಇಲಾಖೆಯ ಸಿಬ್ಬಂದಿ ಗಳಾದ ಗಣೇಶ್, ಲಿಂಗ ರಾಜು, ವೆಂಕಟರಾಜು,ಶ್ರೀಕAಠ ಸೇರಿದಂತೆ ಹಲವಾರು ಹಾಜರಿದ್ದರು,

ವರದಿ ; ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: