ಗುಂಡ್ಲುಪೇಟೆ ಪಟ್ಟಣದ ಅಂಗಡಿಗಳ ಮುಂಭಾಗ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸಲು ಸೂಚಿಸಬೇಕು ಮತ್ತು ಅಳವಡಿಸಿರುವ ನಾಮಫಲಕವೂ ಕನ್ನಡದಲ್ಲಿ ಇರಬೇಕು ಎಂದು ಪುರಸಭೆ ಅಧ್ಯಕ್ಷರಿಗೆ ಕರ್ನಾಟಕ ಕಾವಲು ಪಡೆಯ ಸಂಘಟನೆಯವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಪಟ್ಟಣದಲ್ಲಿ ಹಲವಾರು ಅಂಗಡಿ ಮಳಿಗೆ ಮುಂದೆ ಸಂಪೂರ್ಣ ಆಂಗ್ಲಭಾಷೆ ನಾಮಫಲಕ ವನ್ನೂ ತೆರವುಗೊಳಿಸಿ ಎಲ್ಲಾ ಮಳಿಗೆ ಮುಂಭಾಗ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಅಳವಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಪಿ ಗಿರೀಶ್, ವೆಂಕಟೇಶ್ ಗೌಡ್ರು, ಇಲಿಯಾಸ್ ,ಸಾಧಿಕ್ ಪಾಶ, ಶಕೀಲಾ, ಹೆಚ್ ರಾಜು, ಮಿಮಿಕ್ರಿ ರಾಜು ,ಹಾಗೂ ಪುರಸಭಾ ಸದಸ್ಯರುಗಳು ಹಾಜರಿದ್ದರು.
ವರದಿ:ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.