
ಗುಂಡ್ಲುಪೇಟೆ:- ಜನ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 200 ಯೋಜನೆಗಳನ್ನು ಬಿಚ್ಚಿಟ್ಟ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್.
ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮಕ್ಕೆದೀಪ ಬೆಳಗುವುದರ ಮುಖಾಂತರ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಚಾಲನೆ ನೀಡಿದರು. ನಂತರ ಮಾತಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ತಳಮಟ್ಟದಿಂದ ಹಿಡಿದು ಕೇಂದ್ರದವರೆಗೂ ಗಟ್ಟಿಯಾಗಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟನೆ ಮೂಲಕ ಕೆಲಸ ಮಾಡಬೇಕಾಗಿದೆ . ಅಲ್ಲದೆ ರಾಜ್ಯದಲ್ಲಿ ಎರಡು ರೀತಿಯ ಸಂಕಲ್ಪ ಯಾತ್ರೆ ಶುರುಮಾಡಿದ್ದು ಬಾಗಲಕೋಟೆಯಿಂದ ಪ್ರಾರಂಭಿಸಿ ಇಂದು ಗುಂಡ್ಲುಪೇಟೆಗೆ ಅಗಮಿಸಿದ್ದೇನೆ ಇಲ್ಲಿ ಕಾರ್ಯಕರ್ತರ ಹುಮ್ಮಸ್ಸನ್ನ ನೋಡಿದ್ರೆ ಇಲ್ಲಿ ಕಾಂಗ್ರೆಸ್ ಮಲಗಿದೆ ಎಂಬ ಸಂದೇಶ ಗೊತ್ತಾಗಿದೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ನನ್ನು ಸಂಪೂರ್ಣವಾಗಿ ಮುಕ್ತಗೊಳಿಸಿ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.
ಕಾಂಗ್ರೆಸ್ಸಿನವರು ಮಾಡ್ತಿರೋದು ಭಾರತ್ ಜೋಡೋ ಅಲ್ಲ ಭಾರತ ಬಿಟ್ಟು ಓಡೋ ಎಂದು ವ್ಯಂಗ್ಯವಾಡಿದರು. ನಮಗೆ ವಿಶ್ವಾಸವಿದೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ನಮ್ಮ ಸಂಕಲ್ಪ ಯಾತ್ರೆ ಪ್ರಾರಂಭ ಆದ್ಮೇಲೆ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ. ಪುಟಗಳಲ್ಲಿ ಕಾಣೆಯಾಗಿರುವವರ ಜೊತೆ ಡಿಕೇಶಿಯವರು ತಿಹಾರ್ ಜೈಲಿಗೆ ಹೋಗಲು ಸಿದ್ಧರಿದ್ದಾರೆ ಎಂದು ಹೀಗಳೆದರು..
ಈ ಸಂದರ್ಭದಲ್ಲಿರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ,ತೆಂಗಿನಕಾಯಿ, ತುಳಸಿ ಮುನಿರಾಜು ಗೌಡ,ಜಿಲ್ಲಾ ಅಧ್ಯಕ್ಷರಾದ ಆರ್ ಸುಂದರ್, ಪ್ರೊಫೆಸರ್ ಮಲ್ಲಿಕಾರ್ಜುನಪ್ಪ, ಶಾಸಕರಾದ ನಿರಂಜನ್ ಕುಮಾರ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಾಗಶ್ರೀ ಪ್ರತಾಪ್, ನಾಗೇಂದ್ರಪ್ರಸಾದ್, ರಾಮಚಂದ್ರ, ನಿಜಗುಣ ರಾಜು, ಪಿ ಗಿರೀಶ್, ಎನ್ ಮಲ್ಲೇಶ್, ಎಪಿಎಂಸಿ ರವಿ ,ಬೂತ್ ಮಟ್ಟದ ಕಾರ್ಯಕರ್ತರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಸದಾನಂದ ಕನ್ನೆಗಾಲ

More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.