April 28, 2024

Bhavana Tv

Its Your Channel

ಬಿ.ಜೆ.ಪಿ ಸರ್ಕಾರ ಹಮ್ಮಿಕೊಂಡಿರುವ ಜನ ಸಂಕಲ್ಪಯಾತ್ರೆ ಚುನಾವಣಾ ಗಿಮಿಕ್ : ಎಚ್ ಎಮ್.ಗಣೇಶ್ ಪ್ರಸಾದ್ ಆರೋಪ.

ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಎಮ್.ಗಣೇಶ್ ಪ್ರಸಾದ್ ಅವರು ರಾಜ್ಯ ಬಿಜೆಪಿ ಸರ್ಕಾರ ಹಮ್ಮಿಕೊಂಡಿರುವ ಜನ ಸಂಕಲ್ಪಯಾತ್ರೆ ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಯುವ ಕಾಂಗ್ರೆಸ್ ಮುಖಂಡ ಎಚ್ ಎಮ್ ಗಣೇಶ್ ಪ್ರಸಾದ್ ಆರೋಪಿಸಿದ್ದಾರೆ. ಅವರು ಕಳೆದ ಮೂರುವರೆ ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿಗೆ ಚುನಾವಣಾ ಸಮಯದಲ್ಲಿ ಜನರ ಕಷ್ಟ ಅರಿವಾಯಿತ್ತೆ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಜಿಲ್ಲೆಗೆ ಬರುವ ಮೊದಲು ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸವಾಲೆಸದರು. ಜಿಲ್ಲೆಯಲ್ಲಿ ಕೋರೋನಾ ಸಮಯದಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ 32ಜನ ಮರಣ ಹೊಂದಿದರು 4 ಮಂದಿ ಮಾತ್ರ ಮರಣ ಹೊಂದಿರುವುದು ಆರೋಗ್ಯ ಸಚಿವರು ಸುಳ್ಳು ಹೇಳಿಕೆ ನೀಡಿದರು.ಮತ್ತು ಆಕ್ಸಿಜನ್ ದುರಂತದಲ್ಲಿ ಮಡಿದ ಕುಟುಂಬಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಲ್ಲಿ ನಿಮ್ಮ ಸರಕಾರ ವಿಫಲವಾಯಿತು ದುರಂತ ನಡೆದ ಸಂದರ್ಭದಲ್ಲಿ ಯಾವ ಒಬ್ಬ. ಸರಕಾರದ ಪ್ರತಿನಿಧಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದರು.

ಶಾಸಕರಾದ ನಿರಂಜನ್ ಕುಮಾರ್ ತಾಲ್ಲೂಕಿನಲ್ಲಿ 110 ಕೆರೆಗಳಿಗೆ ನೀರು ತುಂಬಿಸುವುದಾಗಿ ಹೇಳಿಕೆ ನೀಡಿ ತಾಲ್ಲೂಕಿನ ಜನತೆಯನ್ನ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆರೆಗೆ ನೀರು ತುಂಬಿಸುವ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದರೂ ಅದಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದು ಸಿದ್ದರಾಮಯ್ಯನವರು, ಯಾವುದೇ ಯೋಜನೆ ಮಾಡಬೇಕಾದರು ಅದಕ್ಕೆ ಸಂಬAಧಿಸಿದAತೆ ಕೆಲವು ನೀತಿ ನಿಯಮಗಳಿದ್ದು ಹಲವಾರು ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಯೋಜನೆ ಕಾರ್ಯರೂಪಕ್ಕೆ ಬರುವುದು ಆದರೆ ಇದಕ್ಕೆ ಪೂರಕವಾದ ಮಾಹಿತಿಯನ್ನು ಬಹಿರಂಗಪಡಿಸುವAತೆ ಹೇಳಿದರು.

ಕೆರೆಗೆ ನೀರು ತುಂಬಿಸುವ ಯೋಜನೆ ನೂರಾರು ಕೋಟಿ ರೂಪಾಯಿಗಳ ಯೋಜನೆಯಾಗಿದ್ದು ಯಾವ ಅನುದಾನ ಮುಖಾಂತರ ಯೋಜನೆಯನ್ನು ಜಾರಿಗೊಳಿಸುವಿರಿ ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ತೋರಿಸುವಂತೆ ಸವಾಲೆಸದರು.

40% ಕಮೀಷನ್ ಸರ್ಕಾರವಾಗಿದ್ದು ಪಟ್ಟಣದ ಪುರಸಭೆಯ ಅನುದಾನದಲ್ಲಿ ನಿರ್ಮಾಣವಾಗಿರುವ ಪುಟ್ ಪಾತ್ ಕಳಪೆಯಿಂದ ಕೂಡಿದೆ ,ರಸ್ತೆಗಳು ಗುಂಡಿಮಯವಾಗಿದೆ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದ್ದು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಲಾಗುತ್ತಿದೆ ಭಾರತ್ ಜೋಡೋ ಯಾತ್ರೆಯ ಸಂಧರ್ಭದಲ್ಲಿ ಪ್ಲೇಕ್ಸ್ ಹರಿದ ಆರೋಪಿಗಳ ಮೇಲೆ ಪ್ರಕರಣ ದಾಖಲು ಮಾಡದೆ ಒಂದು ಪಕ್ಷದ ವಕ್ತಾರಂತೆ ಇಲಾಖೆ ಕಾರ್ಯ ನಿರ್ವಹಿಸುತ್ತದೆ ಹಾಗೂ ಪ್ರತಿ ಸೋಮವಾರ ನಡೆಯುವ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ದೊರಕಿದೆಯೆ ಎಷ್ಟು ಅರ್ಜಿಗಳು ಸ್ವೀಕೃತವಾದವು ಎನ್ನುವ ಬಗ್ಗೆ ಮಾಹಿತಿಯೆ ಇದು ಕಾಟಚಾರಕ್ಕೆ ನಡೆಯುವ ಕಾರ್ಯಕ್ರಮವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾಡ ಅಧ್ಯಕ್ಷ ಹಂಗಳ ನಂಜಪ್ಪ, ಬಿ.ಎಂ.ಮುನಿರಾಜು ,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕಬ್ಬಹಳ್ಳಿ ಮಹೇಶ್ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ.ಜಿ. ಶಿವಕುಮಾರ್, ಪುರಸಭಾ ಸದಸ್ಯ ,ನಾಕುಮಾರ್. ಪಿಬಿರಾಜಶೇಖರ್ , ಎಪಿಎಂಸಿ ಸದಸ್ಯ ಆರ್. ಎಸ್. ನಾಗರಾಜು ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: