September 21, 2024

Bhavana Tv

Its Your Channel

ಜಿಂಕೆ ಬೇಟೆಯಾಡಿ ಸಾಗಿಸುತ್ತಿದ್ದವರ ಮೂರು ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಓರ್ವ ಬಂಧನ ಇಬ್ಬರು ಪರಾರಿ

ಗುಂಡ್ಲುಪೇಟೆ:- ಗುರುವಾರ ಬೆಳಿಗ್ಗೆ 8:30 ರಲ್ಲಿ ಬಂದ ಖಚಿತ ವರ್ತಮಾನದ ಮೇರೆಗೆ, ಪಿ. ರಮೇಶ್ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ನಿರ್ದೇಶಕರು, ಬಂಡೀಪುರ ರವರ ನಿರ್ದೇಶನದಂತೆ, ರವೀಂದ್ರ, ಜಿ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಗುಂಡ್ಲುಪೇಟೆ ಉಪ ವಿಭಾಗ, ರವರ ಮಾರ್ಗದರ್ಶನದಲ್ಲಿ ಮದ್ದೂರು ವಲಯ ಹಾಗೂ ವಿಶೇಷ ಹುಲಿ ಸಂರಕ್ಷಣಾ ಪಡೆಯ ವಲಯ ಅರಣ್ಯಾಧಿಕಾರಿಗಳಾದ ಮಲ್ಲೇಶ.ಬಿ.ಎಂ. ಮತ್ತು ನವೀನಕುಮಾರ್ ಎನ್ ಪಿ ಇವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ, ದೇವರಾಜು.ಎಮ್. ಉಪ ವಲಯ ಅರಣ್ಯಾಧಿಕಾರಿ ಮತ್ತು ನವೀನ ಅರಣ್ಯ ರಕ್ಷಕ ಹಾಗೂ ಮದ್ದೂರು ವಲಯದ ಸಿಬ್ಬಂದಿ ಮತ್ತು ವಿಶೇಷ ಹುಲಿ ಸಂರಕ್ಷಣಾ ಪಡೆಯ ಉಪ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಕುಮಾರ್.ಬಿ.ಎಸ್, ರಮೇಶ.ಮಠಪತಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚಿಸಿ ಮದ್ದೂರು ವಲಯದ, ಮದ್ದೂರು ಶಾಖೆಯ, ಮಾವಿನ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ 3 ಆಸಾಮಿಗಳು ಸದರಿ ಅರಣ್ಯ ಪ್ರದೇಶದಲ್ಲಿ ಒಂಟಿ ನಳಿಕೆ ಬಂದೂಕಿನಿAದ ಒಂದು ಜಿಂಕೆಯನ್ನು ಕೊಂದು ಮಾಂಸವಾಗಿ ಪರಿವರ್ತಿಸಿ ಹೊತ್ತಿಕೊಂಡು ಬರುತ್ತಿರುವುದನ್ನು ಕಂಡುಬAದು, ಆಸಾಮಿಗಳನ್ನು ಸುತ್ತುವರೆದು ಹಿಡಿಯುವ ಪ್ರಯತ್ನ ಮಾಡಿದಾಗ, ಒಬ್ಬ ಆಸಾಮಿಯು ಕಾಡಿನಲ್ಲಿ ಸಿಕ್ಕಿಬಿದ್ದು, ಉಳಿದ 02 ಜನ ಒಂಟಿ ನಳಿಕ ಬಂದೂಕಿನೊAದಿಗೆ ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ.
ಸಿಕ್ಕಿ ಬಿದ್ದ ಆಸಾಮಿಯ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಒಳಗೆ ಜಿಂಕೆಮಾAಸವಿದ್ದು, ನಂತರ ಸಿಕ್ಕಿ ಬಿದ್ದ ಆಸಾಮಿಯ ಹೆಸರು ಹಾಗೂ ವಿಳಾಸವನ್ನು ವಿಚಾರಿಸಿದಾಗ ವಿಷಕಂಠ ಬಿನ್ ರಂಗನಾಯಕ(46 ವರ್ಷ), ಬೇರಂಬಾಡಿ ಗ್ರಾಮ, ಗುಂಡ್ಲುಪೇಟೆ ತಾಲ್ಲೂಕು.ಎಂದು ತಿಳಿಸಿರುತ್ತಾರೆ. ಮುಂದುವರೆದು ಸದರಿ ಆಸಾಮಿಯು ಜಿಂಕೆ ಮಾಂಸವನ್ನು ತಾನು ತಿನ್ನಲು ಹಾಗೂ ಮಾರಾಟ ಮಾಡುವ ಉದ್ದೇಶಕ್ಕಾಗಿ ವನ್ಯ ಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದಿದ್ದು, ಪಶು ವೈದ್ಯಾಧಿಕಾರಿಯಾದ ವಾಸಿಮ್.ಮಿರ್ಜಾ ರವರು ಪರಿಶಿಲಿಸಿ ಜಿಂಕೆಯೆAದು ಧೃಢಿಕರಿಸಿದ ಮೇರೆಗೆ ಸದರಿ ಕೃತ್ಯವು ವನ್ಯ ಜೀವಿ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿರುವುದರಿಂದ, ಸದರಿ ಆರೋಪಿಯ ಮೇಲೆ ಅರಣ್ಯ ಮೊಕದ್ದಮೆಯನು ದಾಖಲಿಸಿ ದಸ್ತಗಿರಿಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದುವರೆದು ಸದರಿ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯಕ್ಕೆ ತಂಡವನ್ನು ರಚಿಸಲಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೆಗಾಲ

error: