May 4, 2024

Bhavana Tv

Its Your Channel

ತರಕಾರಿ ಬೆಳೆಗಳ ಕುರಿತು ಭಾರತೀಯ ಎಂಜಿನಿಯರಿOಗ್ ವಿಜ್ಞಾನ ಮತ್ತು ತಾಂತ್ರಿಕ ಇನೋವಶನ್ ವಿಶ್ವ ವಿದ್ಯಾಲಯದಿಂದ ರೈತರ ಸಭೆ

ಬಾಗೇಪಲ್ಲಿ : ಭಾರತೀಯ ಎಂಜಿನೀಯರಿoಗ್ ವಿಜ್ಞಾನ ಮತ್ತು ತಾಂತ್ರಿಕ ಇನೋವಶನ್ ವಿಶ್ವವಿದ್ಯಾಲಯ ಅನಂತಪುರ ಇವರು ಆಯೋಜಿಸಿದ್ದ ತರಕಾರಿ ಬೆಳೆಗಳಲ್ಲಿ ಮೌಲ್ಯ ಸರಪಳಿ ನಿರ್ವಹಣೆ ರೈತರ ಸಭೆ ಮಾರ್ಗನಕುಂಟೆ ಶ್ರೀ
ಆಂಜನೆಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಯೋಜಿಸಿದ್ದು ಸುತ್ತಮುತ್ತಲಿನ ಹಳ್ಳಿಗಳ ರೈತರು ಭಾಗವಹಿಸಿದ್ದರು. ಈ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ. ಪಿ. ಚೌಡಪ್ಪ, ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಮತ್ತು ತೋಟಗಾರಿಕೆ ಉತ್ಪನ್ನಗಳ ಹೆಚ್ಚುವರಿ ಉತ್ಪಾದನೆ ದೇಶಕ್ಕೆ ದೊಡ್ಡ ಸವಾಲಗಿ ಮಾರ್ಪಟ್ಟಿದೆ.ಇತ್ತೀಚಿನ ದಿನಗಳಲ್ಲಿ ನೀರಿನ ಅಭಾವ ಇದ್ದರು ಕೃಷಿ ಉತ್ಪಾದನೆ ೩೦೬ ಮಿಲಿಯನ್ ಟನ್ ಮತ್ತು ತೋಟಗಾರಿಕೆ ೩೨೬ ಮಿಲಿಯನ್ ಟನ್‌ಗಳಷ್ಟು ಉತ್ಪಾದನೆ ಪಡೆಯಲಾಗುತ್ತದೆ. ಇದರ ಪರಿಣಾಮ ರೈತರು ತಮ್ಮ ಬೆಳೆಗಳಿಗೆ ಲಾಭದಾಯಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಭಾರತ ಸರ್ಕಾರ ಆಹಾರ ಸಚಿವಾಲಯ ಮತ್ತು ಸಂಸ್ಕರಣೆ ವಿಭಾಗವು ಕೃಷಿಯನ್ನು ಲಾಭದಾಯಕವಾಗಿಸಲು,ರೈತರಿಗೆ ಮೆಗಾ ಫುಡ್ ಪಾರ್ಕ್ ಗಳು,ಕೃಷಿ ಸಂಸ್ಕರಣಾ ಕ್ಲಸ್ಟರ್ ಗಳು ಮತ್ತು ಕಿಸಾನ್ ರೈಲಿನಂತಹ ವಿವಿಧ ಯೋಜನೆಗಳನ್ನು ಆರಂಭಿಸಿದೆ. ಕೃಷಿಯಲ್ಲಿ ಸಾಧ್ಯವಾದಷ್ಟು ವೆಚ್ಚ ಕಡಿಮೆ ಮಾಡುವ ಮೂಲಕ ಮತ್ತು ಮೌಲ್ಯ ವರ್ಧನೆಯನ್ನು ಹೆಚ್ಚಿಸುವ ಮೂಲಕ ಕೃಷಿಯಲ್ಲಿ ಲಾಭದಯಕ ಬೆಲೆ ಪಡೆಯಬಹುದು ಎಂದರು.

ನಮ್ಮ ವಿಶ್ವ ವಿದ್ಯಾಲಯದ ವತಿಯಿಂದ ರೈತರಿಗೆ ಬೇಕಾದ ಸಲಹೆಗಳು ಮತ್ತು ತಾಂತ್ರಿಕ ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಜೈವಿಕ ಗೊಬ್ಬರಗಳು, ಜೈವಿಕ ಕೀಟ ನಾಶ ಮತ್ತು ಎರೆಹುಳ ಗೊಬ್ಬರ ಸಾವಯವ ಪದ್ಧತಿಗಳಿಂದ ದುಬಾರಿ ರಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಲು ಮನವಿ ಮಾಡಿದರು,ಮುಂದಿನ ದಿನಗಳಲ್ಲಿ ಗೌನಿವರಪಲ್ಲಿ ಕಾಲೇಜು ಆವರಣದಲ್ಲಿ ಜೈವಿಕ ಉತ್ಪನ್ನಗಳ ಘಟಕ ಮತ್ತು ತರಕಾರಿ ಸಂಗ್ರಹ ಕೇಂದ್ರವನ್ನು ಸ್ಥಾಪಿಸಿ ಈ ಭಾಗದ ರೈತರಿಗೆ ಸಹಾಯ ಮಾಡುವುದು, ಸ್ಥಳೀಯ ನಿರುದ್ಯೋಗಿ ಯುವಕ/ಯುವತಿಯರಿಗೆ ಅಣಬೆ ಬೇಸಾಯದ ತರಬೇತಿ ನೀಡಿ ವಿಶ್ವ ವಿದ್ಯಾಲಯದ ವತಿಯಿಂದ ಎಲ್ಲ ತಾಂತ್ರಿಕ ಸಹಾಯ ಮಾಡಲಾಗುವುದು ಎಂದರು.

ಮಾರುಕಟ್ಟೆ ನಿರ್ವಹಣೆ ಪೂರೈಕೆಯಲ್ಲಿ ಅಪಾರ ಅನುಭವ ಹೊಂದಿರುವ ನರಸಿಂಹ ರವರು ಮಾತನಾಡಿ ವಿಶ್ವ ವಿದ್ಯಾಲಯದಲ್ಲಿ ಎವರ್ ಗ್ರೀನ್ ನ್ಯಾಚುರಲ್ಸ್ ಎಂಬ ಸಂಸ್ಥೆಯ ಮುಖಾಂತರ ರೈತರು ಬೆಳದ ತರಕಾರಿ ಬೆಳೆಗಳನ್ನು ಕರಿದು ಮಾಡಿ ಕೊಯ್ಲುಸುತ್ತಾರೆ ನಿರ್ವಹಣೆ ಮಾಡುವುದಲ್ಲದೆ, ರೈತರ ಬೆಳೆಯನ್ನು ಇತರೆ ಕಂಪನಿಗಳಾದ ಮೋರ್, ರಿಲಯನ್ಸ್ ಫ್ರೆಶ್ ಹಾಗೂ ಇ-ಕಾಮರ್ಸ್ ಕಂಪನಿಗಳಿಗೂ ಸಂಪರ್ಕ ಒದಗಿಸಿ ಈ ಭಾಗದ ರೈತರು ಮಾರುಕಟ್ಟೆ ನಿರ್ವಹಣೆಯಲ್ಲಿ ಸಫಲರಾಗಿ ಹೆಚ್ಚಿನ ಲಾಭದಾಯಕ ಬೆಲೆ ಪಡೆಯಲು ಸಹಕರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ಸಿಬ್ಬಂದಿಗಳಾದ ಡಾ. ಅರ್ಚನ ಕೆ.ಎ,ಡಾ.ಗಂಗರಾಜು,ಮತ್ತು ಕಾಲೇಜು ಅಬಿವೃದ್ಧಿ ಅಧಿಕಾರಿಗಳಾದ ವೆಂಕಟರಮಣ,ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: