May 2, 2024

Bhavana Tv

Its Your Channel

ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅನಿರ್ದಿಷ್ಟ ಧರಣಿ

ಬಾಗೇಪಲ್ಲಿ:-ವಿವಿಧ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಹಾಗೂ ತಾಲ್ಲೂಕಿಗೆ ಸಂಬAಧಪಟ್ಟ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ನಡೆಯದೆ ಕಚೇರಿಗಳತ್ತ ಪ್ರತಿನಿತ್ಯ ಅಲೆದಾಡುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ವಹಿಸಬೇಕು. ತಾಲ್ಲೂಕಿನ ಗ್ರಾಮೀಣ ಪ್ರದೇಶದ ನಕಾಶೆಯಲ್ಲಿರುವ ರಸ್ತೆಗಳು, ರಾಜಕಾಲುವೆಗಳು, ಕೆರೆಗಳು, ಗುಂಡುತೋಪುಗಳು, ಸರ್ಕಾರಿ ಭೂಮಿಗಳು ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ತಾಲ್ಲೂಕು ಕಛೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯದ ಹಸಿರು ಸೇನೆ ಸಂಚಾಲಕ ಲಕ್ಷ್ಮಣ ರೆಡ್ಡಿ ಮಾತನಾಡಿ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರೈತರಿಗೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ನಡೆಯದೆ ಕಚೇರಿಗಳತ್ತ ಪ್ರತಿನಿತ್ಯ ಅಲೆದಾಡುತ್ತಿರುತ್ತಾರೆ.
ಒಂದು ಕಡೆ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ. ಸರ್ಕಾರಗಳು ಜಾರಿಗೆ ತಂದಿರುವ ಅಗತ್ಯ ವಸ್ತುಗಳ ಸರಕು ಸೇವಾ ಕಾಯ್ದೆ (೨೦೨೦), ಎಪಿಎಂಸಿ ತಿದ್ದುಪಡಿ ಕಾಯ್ದೆ (೨೦೨೦), ಗುತ್ತಿಗೆ ಕೃಷಿ ಕಾಯ್ದೆ (೨೦೨೦) ಹಾಗೂ ವಿದ್ಯುತ್ ಬಿಲ್ (೨೦೨೦)ಗಳು ಕಾಯ್ದೆಗಳನ್ನು ರದ್ದು ಮಾಡದೆ ರೈತರನ್ನು ವಂಚಿಸುತ್ತಿದ್ದಾರೆ,ಇನ್ನೊAದು ಕಡೆ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಲ್ಲಾ ಕಛೇರಿಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಹಾಗೂ ಅಧಿಕಾರಿಗಳು ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ರೀಯಲ್ ಎಸ್ಟೇಟ್ ರವರ ಜೊತೆ ಕೈ ಜೋಡಿಸಿ ಬಡ ರೈತರ ಭೂಮಿಗಳನ್ನು ಅಕ್ರಮ ಖಾತೆಗಳನ್ನು ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ, ಇನ್ನೊಂದು ಕಡೆ ಜನ ಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಹಾಗೂ ರೈತರ ಬೆಳೆ ಬೆಳೆದಿರುವ ರೈತರಿಗೆ ಬೆಂಬಲ ಬೆಲೆ ನೀಡದೆ ಹಾಗೂ ಇನ್ನೂ ಮುಂದೆ ಬರುವ ತಾ .ಪಂ ಜಿಲ್ಲಾ ಪಂಚಾಯತಿ ಚುನಾವಣೆ ಯಲ್ಲಿ ತಮ್ಮ ಅಭ್ಯರ್ಥಿಗಳು ಗೆಲುವಿಗೆ ಕೇವಲ ಒಂದು ವಾರಕ್ಕೆ ಸಾಕಾಗದ ಯಾವ ಪುರುಷಾರ್ಥಕ್ಕೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಿ ಜನ ಪ್ರತಿನಿಧಿಗಳು ರೈತರನ್ನು ವಂಚನೆ ಮಾಡುತ್ತಿದ್ದಾರೆ ಆದ್ದರಿಂದ ಎಲ್ಲಾ ಬೇಡಿಕೆಯನ್ನು ಪೂರೈಸಿದ ಇದ್ದರೆ ಅನಿರ್ದಿಷ್ಟ ಕಾಲ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ರಾಜ್ಯ ಮಹಿಳಾ ಸಂಚಾಲಕಿ ಉಮಾ,ಜಿಲ್ಲಾದ್ಯಕ್ಷ ಪಿ.ಹೆಚ್.ರಾಮನಾಥ, ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ರಘುನಾಥ್ ರೆಡ್ಡಿ, ತಾಲ್ಲೂಕು ಉಪಾಧ್ಯಕ್ಷ ಪಿ.ಈಶ್ವರ ರೆಡ್ಡಿ, ತಾಲ್ಲೂಕು ಸಂಚಾಲಕಿ ಟಿ.ಆರ್.ಪ್ರಮೀಳಾ, ರಮಣ ನಾರಾಯಣ ಸ್ವಾಮಿ, ಶ್ಯಾಮಲಾ, ಚಾಂದ್ ಬಾಷಾ ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: