May 5, 2024

Bhavana Tv

Its Your Channel

“ಕ್ಷೀರ ಭಾಗ್ಯ ಯೋಜನೆ” ಅಡಿಯಲ್ಲಿ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿ ವಿತರಣೆ

ಬಾಗೇಪಲ್ಲಿ ; ೨೦೨೧-೨೨ ಸಾಲಿನ ಜೂನ್ ಮತ್ತು ಜುಲೈ ತಿಂಗಳಲ್ಲಿ (ಎರಡು ತಿಂಗಳು) ಪ್ರತಿ ಶಾಲಾ ವಿದ್ಯಾರ್ಥಿಗೆ ಆಹಾರಧಾನ್ಯದ ಜೊತೆಗೆ ತಲಾ ಅರ್ಧ ಕಿಲೋ ಕೆನೆಭರಿತ ಹಾಲಿನ ಪುಡಿ ವಿತರಿಸುವ ಕರ್ನಾಟಕ ರಾಜ್ಯದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಕ್ಷೀರ ಭಾಗ್ಯ ಯೋಜನೆ ಅನುಷ್ಠಾನಗೊಳಿಸಿದ್ದು, ಇದರ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಬಾಗೇಪಲ್ಲಿ ಪಟ್ಟಣದ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎಸ್ ಸಿದ್ದಪ್ಪ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿ ಪ್ಯಾಕೆಟ್ ವಿತರಣೆ ಮಾಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ
ಕ್ಷೀರಭಾಗ್ಯ ಯೋಜನೆಯಡಿ ಜೂನ್ ಮತ್ತು ಜುಲೈ ತಿಂಗಳ ಹಾಲಿನ ಪುಡಿಯನ್ನು ಪ್ರತಿ ವಿದ್ಯಾರ್ಥಿಗೆ ೧ ಕೆ.ಜಿ ಯಂತೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಸಂಯೋಜಕರು ಜಯರಾಮಪ್ಪ ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ನರಸಿಂಹರೆಡ್ಡಿ ,ಶಿಕ್ಷಣಸಂಯೋಜಕರಾದ ಆರ್ ಹನುಮಂತರೆಡ್ಡಿ,ಮುಖ್ಯಶಿಕ್ಷಕರಾದ ಸಿ.ವೆಂಕಟರಾಯಪ್ಪ ಸಿ ಆರ್ ಪಿ ಕದಿರಪ್ಪ ಸಹಶಿಕ್ಷಕರಾ ಕೆ ಅನಿತ, ಇನಾಯತ್ ಉಲ್ಲಾ ಖಾನ್, ವೆಂಕಟೇಶ್ ಬಾಬು , ಸುಕನ್ಯ , ಲಕ್ಷ್ಮೀದೇವಮ್ಮ, ಆರ್ ಶೈಲ, ಸಲ್ಮಾ , ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಶಾಲಾ ಪೋಷಕರು ಹಾಜರಿದ್ದರು.

ವರದಿ:-ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು

error: