May 5, 2024

Bhavana Tv

Its Your Channel

೨೦೨೩ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ: ನೂತನ ಕಾರ್ಯಾಧ್ಯಕ್ಷ ಮಹಮ್ಮದ್ ನೂರುಲ್ಲಾ

ಬಾಗೇಪಲ್ಲಿ:-ಎರಡು ರಾಷ್ಟ್ರೀಯ ಪಕ್ಷಗಳ ವೈಫಲ್ಯ, ಎಚ್ ಡಿ ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಯೋಜನೆಗಳೇ ಜೆಡಿಎಸ್‌ಗೆ ಶ್ರೀ ರಕ್ಷೆ ಆಗಲಿದ್ದು ರಾಜ್ಯದಲ್ಲಿ ೨೦೨೩ರಲ್ಲಿ ವಿಧಾನ ಸಭೆಯಲ್ಲಿ
ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಾಗೇಪಲ್ಲಿ ತಾಲ್ಲೂಕು ಜೆಡಿಎಸ್ ನೂತನ ಅಧ್ಯಕ್ಷ ಮಹಮ್ಮದ್ ನೂರುಲ್ಲಾ ತಿಳಿಸಿದರು.

ಅವರ ನಿವಾಸದಲ್ಲಿ ನೂತನ ಪಕ್ಷದ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರಗಳನ್ನು ಪತ್ರಿಕಾ ಮಾಧ್ಯಮಕ್ಕೆ ಬಿಡುಗಡೆ ಮಾಡಿ ಮಾತನಾಡಿದ ಅವರು ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಗಳಲ್ಲಿ ಪಕ್ಷಕ್ಕೆ ಬಲ ತುಂಬಲು ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಹಾಗೂ ಮುಂದಿನ ಚುನಾವಣೆಗಳಲ್ಲಿ ಜಯ ಬಾರಿಸಲು ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಲುವಾಗಿ ಬಾಗೇಪಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ಪದಾಧಿಕಾರಿಗಳನ್ನು ನೇಮಿಸಿ ಜೆಡಿಎಸ್ ಪಕ್ಷದ ರಾಜ್ಯಾದಕ್ಷ ಎಚ್. ಡಿ.ಕುಮಾರ್ ಸ್ವಾಮಿ ಆದೇಶ ನೀಡಲಾಗಿದೆ ಎಂದು ಹೇಳಿದರು.
ಬಾಗೇಪಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಮಾತನಾಡಿ ರಾಜ್ಯ ಜೆಡಿಎಸ್ ಪಕ್ಷದ ಆದೇಶದಂತೆ ನೂತನ ಸದಸ್ಯರು ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ತುಂಬುವ ಕೆಲಸ ಮಾಡಿ, ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಬೇಕೆAದು ಪಕ್ಷದ ವರಿಷ್ಠರು ಸಲಹೆಯನ್ನು ನೀಡಲಾಗಿದೆ .ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಎಲ್ಲ ಮುಖಂಡ ಹಾಗೂ ಕಾರ್ಯಕರ್ತರೊಂದಿಗೆ ಜೊತೆಗೂಡಿ ನಿಷ್ಠೆ ಹಾಗೂ ಪ್ರಾಮಾಣಿಕತನದಿಂದ ನಿರ್ವಹಿಸಿ ಪಕ್ಷ ಸಂಘಟನೆಯನ್ನು ಶಕ್ತಿಯುತವಾಗಿ ಕಟ್ಟಲಾಗುವುದೆಂದು ಎಂದು ಹೇಳಿದರು.

ಬಾಗೇಪಲ್ಲಿ ತಾಲ್ಲೂಕು ಸಮಿತಿ:- ಬಾಗೇಪಲ್ಲಿ ತಾಲ್ಲೂಕಿನ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಮಾಜಿ ಪುರಸಭಾ ಸದಸ್ಯ ಮಹಮ್ಮದ್ ನೂರುಲ್ಲಾ, ಅಧ್ಯಕ್ಷರಾಗಿ ಸೂರ್ಯನಾರಾಯಣ ರೆಡ್ಡಿ,ಉಪಾಧ್ಯಕ್ಷರಾಗಿ ವೆಂಕಟರೆಡ್ಡಿ,ಲಕ್ಷ್ಮೀನಾರಾಯಣ,ಮಹಾಪ್ರಧಾನ ಕಾರ್ಯದರ್ಶಿಯಾಗಿ ರೇಡ್ಡಪ್ಪ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ರೆಡ್ಡಿ, ಡಿ. ಸಿ. ಶ್ರೀನಿವಾಸ್, ಸದಸ್ಯರಾಗಿ ಗೂಳೂರು ಶೇಖರ್,ಸುಬ್ಬನ್ನ ರವರನ್ನು ಆಯ್ಕೆಗೊಳಿಸಿ ಆದೇಶ ನೀಡಿದ್ದಾರೆ.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: