May 8, 2024

Bhavana Tv

Its Your Channel

ಅಪೌಷ್ಟಿಕ ತಡೆಗೆ ಪೋಷಣ್ ಮಾಸಾಚರಣೆ ಅಭಿಯಾನ

ಬಾಗೇಪಲ್ಲಿ:- ತಾಲ್ಲೂಕು ಚೇಳೂರು ಹೋಬಳಿ ಚಾಕವೇಲು ಗ್ರಾಮದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು.

ಚಾಕವೇಲು ವೃತ್ತದ ಮೇಲ್ವಿಚಾರಕಿ ಬಸವ್ವ, ಮಾತನಾಡಿ ೫ ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಪೋಷಣ್ ಮಾಸಾಚರಣೆ” ಅಭಿಯಾನ ತಾಲ್ಲೂಕಿನಾದ್ಯಂತ ಸೆಪ್ಟೆಂಬರ್ ೩೦ರವರೆಗೆ ನಡೆಯಲಿದೆ.
ಆರೋಗ್ಯ, ನೈರ್ಮಲ್ಯ ವಿಷಯಗಳನ್ನು ಪ್ರತಿ ಮನೆಗೆ ತಿಳಿಸುವುದರ ಜೊತೆಗೆ ಪ್ರತಿ ಮನೆಗೆ ಭೇಟಿ ನೀಡಿ ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರ ಮಕ್ಕಳ ತೂಕ, ಎತ್ತರವನ್ನು ಮಾಪನ ಮಾಡಲಾಗುವುದು. ಅಲ್ಲದೇ ಆರೋಗ್ಯ ತಪಾಸಣೆ, ಉನ್ನತ ಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ವೆಂಕಟರೆಡ್ಡಿ.ಪಿ.ಎಸ್, ಸಿ.ಡಿ.ಪಿ.ಓ ರಾದ ರಾಮಚಂದ್ರಪ್ಪ, ಚಾಕವೇಲು ವೃತ್ತದ ಮೇಲ್ವಿಚಾರಕಿ ಬಸವ್ವ, ಮೇಲ್ವಿಚಾರಕಿ ಈರವ್ವ, ಬಾಗೇಪಲ್ಲಿ ಬ್ಲಾಕ್ ಸೊಸೈಟಿ ಸದಸ್ಯರಾದ ಅಶ್ವತ್ಥಮ್ಮ, ಜಾನಪದ ಗಾಯಕ ಗೋಪಿನಾಯಕ್, ಆರೋಗ್ಯ ಸಹಾಯಕಿ ಲಕ್ಷ್ಮೀದೇವಿ, ಸಾವಿತ್ರಮ್ಮ, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಾಜರಿದ್ದರು .

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: