May 8, 2024

Bhavana Tv

Its Your Channel

ಮೀನುಗಾರಿಕೆ ಕಟ್ಟಡ ನಿರ್ಮಾಣದಲ್ಲಿ ಕಳಪೆ, ದ.ಸಂ.ಸ. ವತಿಯಿಂದ ಜಿಲ್ಲಾಧಿಕಾರಿಗೆ ದೂರು’:ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಸರ್ಕಾರದ ಹಣ ದುರುಪಯೋಗ

ಬಾಗೇಪಲ್ಲಿ: ತಾಲ್ಲೂಕು ಮೀನುಗಾರಿಕೆ ಕಚೇರಿ ಕಟ್ಟಡವನ್ನು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿ ಲಕ್ಷಾಂತರ ಹಣ ದುರುಪಯೋಗ ಆಗಿದೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ, ತಾಲ್ಲೂಕು ಮುಖಂಡರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದ ಮುಂದೆ ಜಿಲ್ಲಾಧಿಕಾರಿ ಆರ್.ಲತಾರವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನದ ಬಗ್ಗೆ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ರವರು ಸಭೆ ಮಾಡಿದ್ದರು. ಸಭೆ ಮುಗಿದ ಬಳಿಕ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಆರ್.ಲತಾರವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ವಿ.ವೆಂಕಟರವಣ ಮಾತನಾಡಿ, ತಾಲ್ಲೂಕಿನಲ್ಲಿ ದಲಿತರ ಸಮಸ್ಯೆಗಳು ಹೆಚ್ಚಾಗುತ್ತಿವೆ. ತಾಲ್ಲೂಕು ಆಡಳಿತ ಇದುವರಿಗೂ ದಲಿತರ ಕುಂದುಕೊರತೆಗಳ ಹಾಗೂ ಹೋರಾಟಗಳ ಸಭೆ ಮಾಡದೇ ನಿರ್ಲಕ್ಷ್ಯ ಮಾಡುತ್ತಿದೆ. ಈ ಕೂಡಲೇ ದಲಿತ ಮುಖಂಡರ ಸಭೆ ಮಾಡಬೇಕು ಎಂದು ಒತ್ತಾಯಿಸಿದರು. ತಾಲ್ಲೂಕಿನ ಗೌನಪಲ್ಲಿ ಗ್ರಾಮದ ನಿವೇಶನರಹಿತರಿಗೆ ನಿವೇಶನ ಹಾಗು ಮನೆರಹಿತರಿಗೆ ಮನೆಗಳನ್ನು ೧೦ ವರ್ಷಗಳು ಕಳೆದರೂ ನಿವೇಶನ, ಮನೆಗಳನ್ನು ಹಂಚಿಕೆ ಮಾಡಿಲ್ಲ. ಸೆಪ್ಟಂಬರ್ ೨೦ ರಂದು ಇಓ ಕಚೇರಿ ಮುಂದೆ ಎಸ್‌ಸಿಪಿ, ಟಿ.ಎಸ್.ಪಿ ಯೋಜನೆಗಳಲ್ಲಿ ಕೋಟ್ಯಾಂತರ ಹಣ ದುರುಪಯೋಗ ಆಗಿದೆ ಎಂದು ಹೋರಾಟ ಮಾಡಲಾಗಿದೆ. ಇದುವರಿಗೂ ಯಾವುದೇ ತನಿಖೆ ಮಾಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನ ಘಂಟAವಾರಿಪಲ್ಲಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಮೀನುಗಾರಿಕೆ ಕಚೇರಿ ಕಟ್ಟಡವನ್ನು ೪೯ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಮೀನುಗಾರಿಕೆ ಕಚೇರಿ ಕಟ್ಟಡಕ್ಕೆ ಗುತ್ತಿಗೆದಾರರು ಪಾಯ ಹಾಕದೇ, ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ್ದಾರೆ. ಇದರಿಂದ ಸರ್ಕಾರದ ಲಕ್ಷಾಂತರ ಹಣ ದುರುಪಯೋಗ ಆಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿದ್ದಾರೆ. ಕೂಡಲೇ ತನಿಖೆ ಮಾಡಬೇಕು. ಪಟ್ಟಣ, ಗ್ರಾಮಗಳ ಮನೆ, ಹೋಟೇಲ್, ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಆಗುತ್ತಿದೆ. ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿರುವ ಬಗ್ಗೆ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪಟ್ಟಣದಲ್ಲಿ ಒಳಚರಂಡಿ ಯೋಜನೆ ಅವೈಜ್ಞಾನಿಕ ರೀತಿಯಲ್ಲಿ ಮಾಡಿರುವುದನ್ನು ಹಿರಿಯ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು.ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಗಳಲ್ಲಿ ಮಾಡಿರುವ ಅಂಬೇಡ್ಕರ್ ಭವನಗಳ ಬಗ್ಗೆ ತನಿಖೆ ಮಾಡಿಸಬೇಕು. ಹಾಗು ಅಂಬೇಡ್ಕರ್ ಸೇರಿದಂತೆ ವಿವಿಧ ನಿಗಮಗಳಿಂದ ಮಂಜೂರು ಆಗಿರುವ ಫಲಾನುಭವಿಗಳಿಗೆ ಇದುವರಿಗೂ ಕೊಳವೆಬಾವಿಗಳನ್ನು ಕೊರೆಯಿಸಿಲ್ಲ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಆರ್.ಲತಾ ರವರು ಮನವಿ ಪತ್ರ ಸ್ವೀಕರಿಸಿದ ನಂತರ ಪ್ರತಿಕ್ರಿಯಿಸಿ ‘ಕೂಡಲೇ ಬೇಡಿಕೆಗಳನ್ನು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಭೆಗಳು ಮಾಡುವಂತೆ ಹಾಗು ಬೇಡಿಕೆಗಳನ್ನು ಹಂತ ಹಂತದಲ್ಲಿ ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

“ಮೀನುಗಾರಿಕೆ ಕಚೇರಿ ಕಟ್ಟಡಕ್ಕೆ ಪಾಯ ಹಾಕದೇ, ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ಉಳಿಯಲು ಸಾಧ್ಯವಿದೆಯೇ?, ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಸರ್ಕಾರದ ಹಣ ದುರುಪಯೋಗ ಮಾಡಿದ್ದಾರೆ. ಕೂಡಲೇ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸ್ಥಳಪರಿಶೀಲನೆ ಮಾಡಲು ಸ್ಥಳಕ್ಕೆ ಬರುವಂತೆ ಜಿಲ್ಲಾಧಿಕಾರಿಗಳ ಜೊತೆ ಆಗಮಿಸಿದ್ದ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಯಶಸ್ವಿನಿರವರಿಗೆ ದಲಿತ ಸಂಘರ್ಷ ಸಮಿತಿ ಮುಖಂಡರು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಪೈಪಾಳ್ಯರವಿ,ತಾಲ್ಲುಕು ಸಂಘಟನಾ ಸಂಚಾಲಕರಾದ ಕೋಟಪ್ಪ, ಗಂಗುಲಪ್ಪ, ಕಲ್ಲಿಪಲ್ಲಿಗಂಗಾಧರ, ಮುಖಂಡರಾದ ನಂಜುAಡಪ್ಪ, ವಿಜಯ್ ಕುಮಾರ್, ವೆಂಕಟೇಶ್, ನರಸಿಂಹರೆಡ್ಡಿ, ಮಂಜುನಾಥ, ರಾಮಾಂಜಿ ಇದ್ದರು.

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: