May 8, 2024

Bhavana Tv

Its Your Channel

ಕರೋನಾ ಲಸಿಕೆ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾಧಿಕಾರಿಗಳಿಂದ ಅಧಿಕಾರಿಗಳಿಗೆ ತರಾಟೆ

ಬಾಗೇಪಲ್ಲಿ : ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್. ಲತಾ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಕರೋನಾ ಲಸಿಕೆ ಪ್ರಗತಿ ಪರಿಶೀಲನಾ ಸಭೆ ನಡೆದು ಜಿಲ್ಲಾಧಿಕಾರಿಯವರಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಕರೋನಾ ಲಸಿಕೆಗಳನ್ನು ಮೊದಲನೆಯ ಮತ್ತು ಎರಡನೆಯ ಡೋಸ್ ನೀಡುವಲ್ಲಿ ಮತ್ತು ಜನರು ತೆಗೆದುಕೊಳ್ಳುವಲ್ಲಿ ಪ್ರಗತಿ ಕಂಡುಬರುತ್ತಿಲ್ಲ, ಅಧಿಕಾರಿಗಳು ಜವಾಬ್ದಾರಿಯಿಂದ ಈ ಕೆಲಸ ಮಾಡಬೇಕು ಎಂದು ತಿಳಿಸಿದರು.
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ನೋಡಲ್ ಅಧಿಕಾರಿಗಳು ಹಾಗೂ ಪಿ.ಡಿ.ಓ ಹಾಗೂ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಲಸಿಕೆ ಮಾಹಿತಿಯನ್ನು ಪಡೆದುಕೊಂಡರು. ಚಾಕವೇಲು, ಪಾತಪಾಳ್ಯ, ಗೂಳೂರು, ಮಿಟ್ಟೇಮರಿ, ಚೇಳೂರು ಇತ್ಯಾದಿ ಎಲ್ಲಾ ಪಂಚಾಯಿತಿಗಳ ಕೊರೋನಾ ಲಸಿಕೆ ಪ್ರಗತಿಯ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿಗಳು ತಹಸಿಲ್ದಾರ್ ಡಿ.ಎ. ದಿವಾಕರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಸಿ.ಎನ್. ಸತ್ಯನಾರಾಯಣರೆಡ್ಡಿ ಹಾಗೂ ಇ.ಓ ಮಂಜುನಾಥಸ್ವಾಮಿರವರಲ್ಲಿ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಪ್ರಶ್ನಿಸಿ, ನೀವು ಅವರಿಗೆ ಮಾಹಿತಿಯನ್ನು ನೀಡಲಿಲ್ಲವೆ? ಅದೇ ಕೆಲಸವಾಗಿ ನಿಮಗೆ ತಿಳಿಸಿದ್ದರೂ, ನೀವು ಯಾಕೆ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದರು. ಅದೇ ಕೆಲಸವಾಗಿ ನಾವು ಸರ್ಕಸ್ ಮಾಡುತ್ತಿದ್ದರೆ ನೀವುಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತೀದ್ದೀರಿ, ಪದೆ ಪದೆ ಇಲ್ಲಿಗೆ ಬರಲು ನಮಗೇನೂ ಬೇರೆ ಕೆಲಸವಿಲ್ಲ ಎಂದುಕೊAಡಿದ್ದೀರಾ? ಎಂದು ಪ್ರಶ್ನಿಸಿ ಖೇಧ ವ್ಯಕ್ತಪಡಿಸಿದರು. ಆನಂತರ ಇ.ಓ. ಮಂಜುನಾಥಸ್ವಾಮಿ ಎಲ್ಲರಿಗೂ ಮಾಹಿತಿಯನ್ನು ವಾಟ್ಸ ಆಯಪ್ ಮೂಲಕ ಮಾಹಿತಿಯನ್ನು ಕಳುಹಿಸಿದ್ದೇನೆ ಎಂದು ಜಿಲ್ಲಾಧಿಕಾರಿಗಳಿಗೆ ತಮ್ಮ ಮೊಬೈಲ್‌ನ್ನು ತೋರಿಸಿದಾಗ, ಪಶು ವೈದ್ಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮ ಪ್ರಕಾರ ೪೬ ಸಾವಿರ ಜನರಿಗೆ ಕರೋನಾ ಲಸಿಕೆಯನ್ನು ನೀಡಬೇಕು ಎಂಬ ಅಂಕಿಅAಶಗಳಿವೆ. ಆದರೆ ತಾವು ನೀಡುತ್ತಿರುವ ಅಂಕಿಅAಶಗಳ ಪ್ರಕಾರ ೧೦ ಸಾವಿರ ಎಂದು ಹೇಳುತ್ತಿದ್ದೀರಿ, ನೀವು ಹಳ್ಳಿಗಳಿಗೆ ಹೋದಾಗ ಜನರು ಲಸಿಕೆ ಪಡೆದಿದ್ದೇನೆ ಎಂದು ನಿಮಗೆ ತಪ್ಪು ಮಾಹಿತಿ ನೀಡಿದರೆ, ಮೊಬೈಲ್ ಮುಖಾಂತರ ಬರುವ ಮಾಹಿತಿಯನ್ನು ಆಧರಿಸಿ ಪರೀಕ್ಷಿಸಿ, ಸ್ಥಳದಲ್ಲೇ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಲಸಿಕೆ ಅಭಿಯಾನವನ್ನು ಸಂಪೂರ್ಣ ಸಾಧಿಸಬೇಕು, ಸಾರ್ವಜನಿಕರು ಲಸಿಕೆ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಅವರಿಗೆ ಸರಿಯಾದ ಮಾಹಿತಿಯನ್ನು ನೀಡಿ, ಲಸಿಕೆ ನೀಡಬೇಕು ಎಂದರು.
ಬೇರೆ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಜನರು ಲಸಿಕೆ ಪಡೆದುಕೊಂಡಿದ್ದು, ರಾಷ್ಟ್ರೀಯ ಲಸಿಕೆ ಅಭಿಯಾನದಂತೆ ಮುಂಬರುವ ಬುಧವಾರದೊಳಗೆ ೨೫ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ೪೫,೦೦೦ ಜನರಿಗೆ ಲಸಿಕೆ ಬಾಕಿ ಇದ್ದು, ಅದನ್ನು ಸಂಪೂರ್ಣ ಸಾಧಿಸಬೇಕು ಎಂದು ತಾಕಿತು ಮಾಡಿದರು. ಹೋಬಳಿವಾರು ಗುರಿ ನಿಗಧಿಪಡಿಸಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಮಿನುಗಾರಿಕೆ ಇಲಾಖೆಯ ಜಿಲ್ಲಾ ನಿರ್ದೇಶಕಿ ಯಶಸ್ವಿನಿ, ಜಿಲ್ಲಾ ಮತ್ತು ಕುಟುಂಬ ಇಲಾಖೆ ಪ್ರಭಾರಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚನ್ನಕೇಶವ ರೆಡ್ಡಿ ಬಾಗೇಪಲ್ಲಿ ತಾಲ್ಲೂಕು ತಹಶಿಲ್ದಾರ್ ಡಿ. ಎ.ದಿವಾಕರ್,ಇಓ ಮಂಜುನಾಥ ಸ್ವಾಮಿ, ಸಭೆಯಲ್ಲಿ ಆರೋಗ್ಯ, ಕೃಷಿ, ಅರಣ್ಯ, ಶಿಕ್ಷಣ, ಸಾರಿಗೆ, ಜಿಲ್ಲಾಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ರಾಜಸ್ವ, ಪಶುವೈದ್ಯ, ಪುರಸಭೆ, ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: