May 8, 2024

Bhavana Tv

Its Your Channel

ಬಾಗೇಪಲ್ಲಿ : ಲೋಕ ಅದಾಲತ್‌ನಲ್ಲಿ ೨೩೪ ಪ್ರಕರಣ ಇತ್ಯರ್ಥ

ಬಾಗೇಪಲ್ಲಿ :-ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ
ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಲೋಕ ಅದಾಲತ್ ನಲ್ಲಿ ಒಟ್ಟು ೨೩೪ ಪ್ರಕರಣಗಳನ್ನು ಇತ್ಯರ್ಥಪಡಿಸಿ ಸುಮಾರು ೧೯,೦೧೬೦೦ ಲಕ್ಷ ಮೊತ್ತವನ್ನು ವಿಲೇವಾರಿ ಮಾಡಲಾಗಿದೆ ಎಂದು ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಎಸ್ ಎಂ ಅರುಟಗಿ ತಿಳಿಸಿದರು.

ಚೆಕ್ ಬೌನ್ಸ್ ೪ ಪ್ರಕರಣಗಳು, ಸಿವಿಲ್ ೧೬ , ಜನನ ಪ್ರಮಾಣ ಪತ್ರಗಳ ೧, ಕ್ರಿಮಿನಲ್ ಪ್ರಕರಣಗಳು :-೨೧೮ , ಡಿವಿ ಆ್ಯಕ್ಟ್ ೧ ಇತರೆ ಪ್ರಕರಣಗಳು ಸೇರಿ ಒಟ್ಟು ೨೩೪ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಮುಕ್ತಾಯಗೊಳಿಸಲಾಯಿತು ಎಂದರು.
ವಾದಿ-ಪ್ರತಿವಾದಿಗಳು, ರಾಜೀ ಸಂಧಾನಕಾರರು ಹಾಗೂ ವಕೀಲರು ಬೃಹತ್ ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಿದರು ಎಂದು ಅವರು ತಿಳಿಸಿದರು.

ಸಾರ್ವಜನಿಕರು ಕನಿಷ್ಠಮಟ್ಟದ ಕಾನೂನಿನ ಅರಿವನ್ನು ಪಡೆದುಕೊಳ್ಳಬೇಕು. ಕಾನೂನಿನ ಅರಿವಿದ್ದರೆ ಹಲವಾರು ಪ್ರಕರಣಗಳು ಸುಲಭವಾಗಿ ಇತ್ಯರ್ಥವಾಗುತ್ತವೆ. ಹೆಚ್ಚಿನ ಕಾನೂನು ಅಂಶಗಳಿಲ್ಲದ ಪ್ರಕರಣಗಳ ಮೊಕದ್ದಮೆಗಳಲ್ಲಿ ಅನಗತ್ಯವಾಗಿ ನ್ಯಾಯಾಲಯಗಳಿಗೆ ಅಲೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡರೆ ನ್ಯಾಯಾಲಯಗಳ ಶುಲ್ಕ, ವಕೀಲರ ಶುಲ್ಕ, ಅಲೆದಾಡುವ ಶ್ರಮ, ಖರ್ಚು ಉಳಿತಾಯವಾಗುತ್ತದೆ. ಉತ್ತಮ ಬಾಂಧವ್ಯವೂ ಉಳಿಯುತ್ತದೆ ಎಂದರು.
ಸಣ್ಣ ಪುಟ್ಟ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾದರೆ ನ್ಯಾಯಾಲಯಗಳ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ಇತರೆ ಪ್ರಕರಣಗಳು ಶೀಘ್ರವಾಗಿ ಇತ್ಯರ್ಥ ಮಾಡಲು ಸಹಕಾರಿಯಾಗುತ್ತದೆ. ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ಇತ್ಯರ್ಥವಾಗುವುದು ವಿಳಂಬವಾಗುತ್ತದೆ ಎನ್ನುವುದು ಸಾಮಾನ್ಯ ಜನರು ಅಭಿಪ್ರಾಯಪಡುತ್ತಾರೆ. ದಿನ ದಿನವೂ ಮೊಕದ್ದಮೆಗಳ ಹೊರೆ ಅಧಿಕವಾಗುತ್ತಿದೆ ಎಂದು ತಿಳಿಸಿದರು.
ಸಾಮಾನ್ಯ ಜನರ ಸಣ್ಣ ಪುಟ್ಟ ಮೊಕದ್ದಮೆಗಳನ್ನು ಸುಲಭವಾಗಿ ಇತ್ಯರ್ಥಪಡಿಸಲು ಹಾಗೂ
ನ್ಯಾಯಾಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿಯೇ ಸುಪ್ರೀಂ ಕೋರ್ಟ್ ಮತ್ತು
ರಾಜ್ಯದ ಉಚ್ಛ ನ್ಯಾಯಾಲಯ ದೇಶಾದ್ಯಂತ ಲೋಕ ಅದಾಲತ್ ಗಳನ್ನು ಹಮ್ಮಿಕೊಳ್ಳುವಂತೆ ಆದೇಶ
ನೀಡಿವೆ. ಅದಾಲತ್ ಗಳು ಪ್ರತಿ ತಿಂಗಳು ನಿರಂತರವಾಗಿ ನಡೆಯುತ್ತವೆ. ಸಾರ್ವಜನಿಕರು ಇದರ
ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು .

ಕಕ್ಷಿದಾರರು ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳು ವುದರ ಮೂಲಕ ಸಮಾಜದಲ್ಲಿ ಉತ್ತಮ ಬಾಂಧವ್ಯ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಕಕ್ಷಿದಾರರ ತಮ್ಮ ವೈಷಮ್ಯಗಳನ್ನು ಮತ್ತು ರಾಜಕೀಯ ಕಾರಣಗಳನ್ನ ಮರೆತು ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣಗಳನ್ನು ರಾಜಿ ಮಾಡಿಕೊಂಡರೆ ಅವರ ಜೀವನ ಉತ್ತಮವಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದರು .

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್, ಉಪಾಧ್ಯಕ್ಷರಾದ ಅರುಣ ,ಕಾರ್ಯದರ್ಶಿ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಎ ನಂಜುAಡಪ್ಪ , ಫಯಾಜ್ ಭಾಷಾ , ನರಸಿಂಹರೆಡ್ಡಿ , ಅಲ್ಲಾಬಕಾಶ್ ,ಕರುಣಾಸಾಗರ ರೆಡ್ಡಿ , ಜೆ ಎನ್ ಮಂಜುನಾಥ್ , ನಂಜಪ್ಪ , ಆರ್ ಚಂದ್ರಶೇಖರ್ ,ಚಾಂದ್ ಬಾಷಾ, ವಕೀಲರ ಸಂಘದ ಕಾರ್ಯದರ್ಶಿ ಪ್ರಸನ್ನಕುಮಾರ್, ಸತ್ಯನಾರಾಯಣ ರಾವ್ , ಬಿಂದು ಕುಮಾರಿ ,ಮಮತ ,ವೆಂಕಟರಮಣ , ಬಾಬು , ಮಹೇಶ್ , ನಾಗಭೂಷಣ , ಬಾಲುನಾಯಕ್,ಸತೀಶ್ ಕುಮಾರ್, ಇತರ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು .

ವರದಿ: ಗೋಪಾಲ ರೆಡ್ಡಿ ಬಾಗೇಪಲ್ಲಿ

error: