September 16, 2024

Bhavana Tv

Its Your Channel

ಸಚೀವ ಸಂಪುಟ ವಿಸ್ತರಣೆ ೧೦ ನೂತನ ಶಾಸಕರು ಸಚೀವರಾಗಿ‌ ಆಯ್ಕೆ ಉತ್ತರಕನ್ನಡ ಜಿಲ್ಲೆಯ ಶಿವರಾಮ ಹೆಬ್ಬಾರಗೆ ನಿರಿಕ್ಷೀತವಾಗಿ ಸಚೀವ ಸಂಪುಟಕ್ಕೆ ಸೆರ್ಪಡೆ

ಬೆಂಗಳೂರು / ಯಲ್ಲಾಪುರ-ಮುಂಡಗೋಡ ವಿಧಾನ ಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ವಿಧಾನಸಭೆಗೆ ಪುನರಾಯ್ಕೆಯಾಗಿದ್ದ
ಶಾಸಕ ಶಿವರಾಮ ಹೆಬ್ಬಾರ ಗುರುವಾರ ಸಂಪುಟ ಸಚಿವರಾಗಿ #ಪ್ರಮಾಣವಚನ #ಸ್ವೀಕರಿಸಿದರು.

ಅವರಿಗೆ ಯಾವ ಖಾತೆ ಒಲಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ‌.

ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿದ ಬಳಿಕ ಶಿವರಾಮ ಹೆಬ್ಬಾರ ಅವರು ಫೇಸಬುಕ್ ನಲ್ಲಿ ಮಾತುಗಳು ;- ಸಚಿವ ಸ್ಥಾನದ
ಗೌರವಕ್ಕೆ ಕಾರಣರಾಗಿರುವ ನನ್ನ ಕ್ಷೇತ್ರದ ಜನತೆ, ನನ್ನನ್ನು ಸದಾ ಬೆಂಬಲಿಸಿ ಬೆಳೆಸಿದ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ನನ್ನ ಧನ್ಯವಾದಗಳು.

ನನ್ನ ಮೇಲೆ ನಂಬಿಕೆ ಇಟ್ಟು ಸಚಿವರಾಗಿ ರಾಜ್ಯದ ಜನತೆಯ ಸೇವೆ ಮಾಡುವ ಅವಕಾಶ ನೀಡಿದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಡಿಯೂರಪ್ಪ ನವರಿಗೆ ಹಾಗೂ ಕೇಂದ್ರದ ನಾಯಕರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೆನೆ ಎಂದಿದ್ದಾರೆ. ಅದರಂತೆ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ೧೦ ಶಾಸಕರಿಗೆ ಸಚೀವ ಸ್ಥಾನದ ಸುಯೋಗ ಒದಗಿ ಬಂದಿದೆ.

error: