ಭಟ್ಕಳ ನಗರವು ಕೊರೊನಾ ಹಾಟ್‌ಸ್ಪಾಟ್ ಎಂದು ಘೋಷಿಸಲ್ಪಟ್ಟು ದಿನದ ೧೮ ಗಂಟೆಗೂ ಹೆಚ್ಚು ಕೆಲಸವನ್ನು ಮಾಡಿದ ಪೊಲೀಸರು ತಮ್ಮ ಒತ್ತಡದ ನಡುವೆಯೂ ಕೂಡಾ ರಸ್ತೆ ಪಕ್ಕದಲ್ಲಿರುವ ಅನಾಥರು, ಬಡವರು ಹಾಗೂ ಬೇರೆ ಕಡೆಯಿಂದ ಬಂದು ರಸ್ತೆ ಪಕ್ಕದಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವವರಿಗೆ ಊಟ ಕೊಡುವ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವತಃ ಡಿ.ವೈ.ಎಸ್.ಪಿ. ಗೌತಮ್ ಕೆ.ಸಿ. ಹಾಗೂ ಅವರ ಇಲಾಖೆಯ ಸಹೋದ್ಯೋಗಿಗಳು ತಮಗಾಗಿ ತಯಾರಿಸಿಕೊಂಡಿದ್ದ ಊಟದಲ್ಲಿಯೇ ನಗರದಲ್ಲಿ ಅನೇಕ ಕಡೆಗಳಲ್ಲಿ ಇರುವವರಿಗೆ ನೀಡುತ್ತಿರುವುದು ಮಾತ್ರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ. ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವರಲ್ಲ, ಸಮಾಜ ಸಂಕಷ್ಟದಲ್ಲರುವಾಗ ಅವರ ನೆರವಿಗೂ ಬರುತ್ತಾರೆ ಎನ್ನುವುದನ್ನು ಈ ಮೂಲಕ ಡಿ.ವೈ.ಎಸ್.ಪಿ. ನೇತೃತ್ವದ ಪಡೆ ತೋರಿಸಿಕೊಟ್ಟಿದೆ. ಸಮಾಜಕ್ಕೊಂದು ಉತ್ತಮ ಸಂದೇಶವನ್ನು ಸಾರುತ್ತಿರುವ ಇವರ ಕಾರ್ಯ ನಾಗರೀಕರ ಪ್ರಶಂಸೆಗೊಳಗಾಗಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.