April 26, 2024

Bhavana Tv

Its Your Channel

ಕ್ವಾರಂಟೈನ್‌ನಿoದ ಮನೆಗೆ ಮರಳಿದ ನಾಲ್ವರು.

ಭಟ್ಕಳ: ಕೊರೊನಾ ಸೋಂಕಿನಿoದಾಗಿ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಾಸದ ನಂತರ ೧೪ ದಿನಗಳ ಕಾಲ ಸರಕಾರದ ಕ್ವಾರಂಟೈನ್‌ನಲ್ಲಿ ಇದ್ದು ಮತ್ತೆ ಪುನಃ ಪರೀಕ್ಷೆ ಮಾಡಿದಾಗ ನೆಗೆಟಿವ್ ಬಂದ ನಾಲ್ವರನ್ನು ಇಂದು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸಹಾಯಕ ಆಯುಕ್ತ ಭರತ್ ಎಸ್. ಅವರು ಮನೆಗೆ ಬೀಳ್ಕೊಟ್ಟರು.

ಭಟ್ಕಳದಲ್ಲಿ ಒಟ್ಟೂ ೧೦ ಜನ ಸೋಂಕಿತರು ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ೯ ಜನರು ಚಿಕಿತ್ಸೆ ಪಡೆದು ಮರಳಿದ್ದು, ಓರ್ವ ಮಹಿಳೆ ಉಡುಪಿಯ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಚಿಕಿತ್ಸೆ ಪಡೆದು ಮರಳಿದವರಲ್ಲಿ ಈಗಾಗಲೇ ಮೂವರು ಬಿಡುಗಡೆ ಹೊಂದಿದ್ದು, ಇಂದು ನಾಲ್ವರನ್ನು ಬಿಡುಗಡೆಗೊಳಿಸಿದಂತಾಗಿದೆ. ಚಿಕಿತ್ಸೆ ಪಡೆದವರಲ್ಲಿ ಒಟ್ಟೂ ೭ ಜನರು ಮನೆಗೆ ಮರಳಿದಂತಾಗಿದ್ದು ಇನ್ನು ಮೂವರು ಸರಕಾರಿ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದಂತೆ ಒಬ್ಬರು ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ. ಒಟ್ಟಾರೆ ಭಟ್ಕಳದಲ್ಲಿ ಕಳೆದ ೧೪ ದಿನಗಳಿಂದ ಯಾವುದೇ ಕೊರೊನಾ ಸೋಂಕು ಪತ್ತೆಯಾಗದೇ ಇರುವುದರಿಂದ ನಾಗರೀಕರು ಹಾಗೂ ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತ, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತಾಗಿದೆ.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಡಾ. ಶರದ್ ನಾಯಕ, ಆಸ್ಪತ್ರೆಯ ವೈದ್ಯಾಧಿಕಾಡಿ ಡಾ. ಸವಿತಾ ಕಾಮತ್, ಡಾ. ಕಮಲಾ, ಕೊರೊನಾ ವಾರಿಯರ್ ನಿಸಾರ್ ಅಹಮ್ಮದ್, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

error: