December 22, 2024

Bhavana Tv

Its Your Channel

ಯಕ್ಷಗಾನ ಕಲಾವಿದರಿಗೆ ಮಾಜಿ ಶಾಸಕ ಮಂಕಾಳ ವೈದ್ಯರಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ.

ಕರೊನಾ ಮಹಾಮಾರಿಯ ಸಮಸ್ಯೆಯಿಂದ ಅತ್ಯಂತ ಸಮಸ್ಯೆಯಲ್ಲಿರುವ ಯಕ್ಷಗಾನ ಕಲಾವಿದರನ್ನು ಮಾಜಿ ಶಾಸಕ ಮಂಕಾಳ್ ವೈದ್ಯ ಆಹಾರ ಸಾಮಗ್ರಿಗಳ ಕಿಟ್ ನ್ನು ಸೋಮವಾರ ಒಕ್ಕಲಿಗರ ಸಭಾಭವನದಲ್ಲಿ ವಿತರಿಸಿದರು. ಕಳೆದ ೪೦ ದಿನಗಳಿಂದ ದೇಶಾದ್ಯಂತ ಲಾಕಡೌನ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ರದ್ದಾದ ಹಿನ್ನೆಲೆಯಲ್ಲಿ
ಯಕ್ಷಗಾನ ಕಲಾವಿದರು ಮನೆಯಲ್ಲಿಯೇ ಅನಿವಾರ್ಯವಾಗಿ ಉಳಿಯುವ ಪರಿಸ್ಥಿತಿ ಉಂಟಾಗಿತ್ತು. ಯಕ್ಷಗಾನ ಕಲಾವಿದರು ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದವರೆಗೆ ಯಕ್ಷಗಾನ ಪ್ರದರ್ಶನವನ್ನು ನೀಡಿ ತಮ್ಮ ಜೀವನವನ್ನು ಸಾಗಿಸುವುದು ರೂಡಿ. ಕಳೆದ ನಲವತ್ತು ದಿನಗಳಿಂದ ಪ್ರದರ್ಶನಗಳು ರದ್ದುಗೊಂಡಿದ್ದು ಕಲಾವಿದರು ಮನೆಯಲ್ಲಿ ಉಳಿಯಬೇಕಾಗಿದ್ದರಿಂದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತ್ತು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರ ಸಮಸ್ಯೆಯನ್ನು ಅರಿತ ಮಾಜಿ ಶಾಸಕ ಮಂಕಾಳು ವೈದ್ಯ ಯಕ್ಷಗಾನ ಕಲಾವಿದರಿಗೆ ಕಿಟ್ಟು ಆಹಾರ ಸಾಮಗ್ರಿಗಳ ಕಿಟ್ಟು ಕಿಟ್ಟು ವಿತರಣೆ ಮಾಡಿದರು.
ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಯಲಗುಪ್ಪ ಕಲಾವಿದ ಈಶ್ವರ ನಾಯ್ಕ ಅನಿಸಿಕೆ ವ್ಯಕ್ತಪಡಿಸಿ ಅಧಿಕಾರವಧಿಯಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿದ ಅವರು ಅಭಿನಂದನಾರ್ಹರು ಎಂದು ಯಕ್ಷಗಾನ ಕಲಾವಿದರ ಕಲಾವಿದರಾದ ರಾಘು ನಾಯ್ಕಕಾಮಕ್ಕಿ, ನಾಗರಾಜ ಭಟ್ ಕೆಕ್ಕಾರ, ಮಂಕಾಳ ವೈದ್ಯರಿಗೆ ಕ್ರತಜ್ನತೆ ಸಲ್ಲಿಸಿದರು. ಜಿ.ಪಂ ಸದಸ್ಯ ಅಲ್ಬರ್ಟ್. ಒಕ್ಕಲಿಗ ಸಮುದಾಯ ಭವನದ ಕಾರ್ಯದರ್ಶಿ ಬಾಲಚಂದ್ರ ಗೌಡ ಉಪಸ್ಥಿತರಿದ್ದರು. ಕಲಾವಿದರಾದ ಚಂದ್ರಹಾಸ ಗೌಡ ಹೊಸಪಟ್ಟಣ,ಉದಯ ಹೆಗಡೆ ಮಾಳ್ಕೋಡ,ರಾಜೇಶ ಭಂಡಾರಿ, ನಾಗರಾಜ ಭಂಡಾರಿ, ಯಕ್ಷಭಿಮಾನಿ ಬಳಗ ಮಂಕಿಯ ಭಾಸ್ಕರ ನಾಯ್ಕ,ಚಂದ್ರಶೇಖರ ಧರ್ಮ ಗೌಡ,ಮುಂತಾದವರು ಉಪಸ್ಥಿತರಿದ್ದರು. ಕಿಟ್ ವಿತರಣೆ ನಂತರ ಕಲಾವಿದರ ಮನೆಗೆ ತಲಾ೧೦ ಕೆ.ಜಿ ಅಕ್ಕಿಯನ್ನು ಮಂಕಾಳು ವೈದ್ಯರವರು ಸರಬರಾಜು ಮಾಡಿದರು.
ಲಾಕಡೌನ ಸಂದರ್ಭದಲ್ಲಿ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಯಕ್ಷಗಾನ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸಿರುವುದು ಯಕ್ಷಗಾನ ಕಲಾವಿದರಿಂದ ಹಾಗೂ ಯಕ್ಷಗಾನ ಅಭಿಮಾನಿಗಳಿಂದ ಮಾಜಿ ಶಾಸಕ ಮಂಕಾಳು ವೈದ್ಯ ಅಭಿನಂಧನೆಗೆ ಪಾತ್ರರಾದರು.

error: