January 26, 2025

Bhavana Tv

Its Your Channel

ಈಜಲು ಹೋದ ಮೂವರಲ್ಲಿ ತಂದೆ ಮಗನನ್ನು ರಕ್ಷಣೆ ಮಾಡಿದ ಸ್ಥಳಿಯರು ಒರ್ವನಿಗಾಗಿ ಶೋಧ ಕಾರ್ಯ ಮುಂದುವರಿಕೆ.

ಹೊನ್ನಾವರ; ತಾಲೂಕಿನ ಕರ್ಕಿ ಹೆಗಡೆಹಿತ್ತಲ ನಿವಾಸಿಗಳಾದ ಸುಬ್ರಾಯ ನಾರಾಯಣ ಮುಕ್ರಿ, ಸೂರಜ್ ಸುಬ್ರಾಯ ಮುಕ್ರಿ, ದರ್ಶನ ಮಂಜು ಮುಕ್ರಿ ಎನ್ನುವವರು ಮಂಗಳವಾರ ಮನೆಯ ಸಮೀಪದ ನದಿಯಲ್ಲಿ ಈಜಲು ತೆರಳಿದ್ದರು. ಈಜಾಡುತ್ತಾ ನದಿಯ ಮಧ್ಯಭಾಗಕ್ಕೆ ತೆರಳಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ ಸ್ಥಳಿಯರು ಗಮನಸಿ ಸಹಾಯಕ್ಕೆ ದೋಣಿ ಮೂಲಕ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ನದಿಯಲ್ಲಿ ಒದ್ದಾಡುತ್ತಿದ್ದ ತಂದೆ ಮತ್ತು ಮಗನಾದ ಸುಬ್ರಾಯ ಮುಕ್ರಿ ಹಾಗೂ ಸೂರಜ್ ಇವರನ್ನು ರಕ್ಷಿಸಲಾಗಿದ್ದು ದರ್ಶನ್ ಎನ್ನುವಾತ ನಾಪತ್ತೆಯಾಗಿದ್ದಾನೆ. ದರ್ಶನ ೮ನೇ ತರಗತಿ ಅಧ್ಯಯನ ನಡೆಸುತ್ತಿದ್ದಾನೆ. ದರ್ಶನನಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹೊನ್ನಾವರ ಅಫರಾಧ ವಿಭಾಗದ ಪಿಎಸೈ ಸಾವಿತ್ರಿ ನಾಯಕ ತಂಡದವರು ಧಾವಿಸಿ ಹುಡುಕಾಟ ನಡೆಸುತ್ತಿದ್ದಾರೆ.

error: