May 19, 2024

Bhavana Tv

Its Your Channel

ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳ ದಾಳಿ ತೋಟದಲ್ಲಿ ಬಚ್ಚಿಟ್ಟ ೧೫ಲೀಟರ್ ಕಳ್ಳಬಟ್ಟಿ ಜಪ್ಪಿ ಮಾಡಿದ ಅಧಿಕಾರಿಗಳು


ಹೊನ್ನಾವರ ; ಕರೋನಾ ಸುರಕ್ಷತೆಗೆ ದೇಶದ್ಯಂತ ಲಾಕ್ ಡೌನ್ ಬಳಿಕ ರಾಜ್ಯದಲ್ಲಿ ಮಧ್ಯ ನಿಷೇದ ಜಾರಿ ಮಾಡಲಾಗಿತ್ತು. ಈ ಸಮಯದಲ್ಲಿ ಗ್ರಾಮೀಣಭಾಗದಲ್ಲಿ ಕಳ್ಳಭಟ್ಟಿ ಅಕ್ರಮ ಸಾರಾಯಿ ತೆಗೆಯುವಿಕೆ ಹೇರಳವಾಗಿತ್ತು. ಅಧಿಕಾರಿಗಳು ಆಗಾಗ ದಾಳಿ ನಡೆಸಿ ಪತ್ತೆ ಹಚ್ಚಿತ್ತಿದ್ದರು ಪ್ರತಿನಿತ್ಯ ತಾಲೂಕಿನಲ್ಲಿ ಕಲ್ಳಭಟ್ಟಿ ಪ್ರಕರಣ ದಾಖಲಾಗುತ್ತಲ್ಲೆ ಇದೆ.ಮಂಗಳವಾರ ತಾಲೂಕಿನ ಜಲವಳ್ಳಿ ಗ್ರಾಮದ ವೀರನಗುಡಿಯ ನಿವಾಸಿಯಾದ ಗಿರೀಶ ನಾರಾಯಣ ನಾಯ್ಕ ಈತನ ಮನೆಯ ತೋಟದ ಕಟ್ಟಿಗೆ ರಾಶಿಯ ಪಕ್ಕದಲ್ಲಿ ದಾಳಿ ನಡೆಸಿದಾಗ ತೆಂಗಿನ ಗರಿಗಳಿಂದ ಮರೆಮಾಚಿಟ್ಟಿದ್ದ ಒಂದು ತಗಡಿನ ಡಬ್ಬಿಯಲ್ಲಿ ಸುಮಾರು ೧೫ ಲೀ. ದಷ್ಟು ಗೇರು ಹಣ್ಣಿನ ಬೆಲ್ಲದ ಕೊಳೆಯನ್ನು ಕಳ್ಳಭಟ್ಟಿ ಸರಾಯಿಯನ್ನು ತಯಾರಿಸುವ ಉದ್ದೇಶದಿಂದ ದಾಸ್ತಾನು ಇಟ್ಟಿರುವುದನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಮಯದಲ್ಲಿ ಆರೋಪಿ ಗೀರೀಶ ನಾಯ್ಕ ನಾಪತ್ತೆಯಾಗಿದ್ದಾರೆ.
ಹೊನ್ನಾವರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ, ಸಂತೋಷ ಕುಡಾಲಕರ್, ಅಬಕಾರಿ ಇಲಾಖೆಯ ಅಧಿಕಾರಿಗಳಾದ ದಾಮೋದರ್ ಎನ್ ನಾಯ್ಕ º ಅಬಕಾರಿ ಉಪ ನಿರೀಕ್ಷಕರಾದ ಗಂಗಾಧರ್ ಯು, ಅಬಕಾರಿ ರಕ್ಷಕರಾದ ರಮೇಶ ರಾಠೋಡ್, ಮುತ್ತೆಪ್ಪ ಬುಗಡಿಕಟ್ಟಿ, ವಾಹನ ಚಾಲಕರಾದ ಸಿದ್ರಾಮಪ್ಪ ಹೊಳೆಪ್ಪಗೋಳ ಪಾಲ್ಗೊಂಡಿದ್ದಾರೆ.

error: