September 18, 2024

Bhavana Tv

Its Your Channel

ಜಿಲ್ಲಾ ಸಂಸದರ ಮೂಲಕ ಪ್ರಧಾನಮಂತ್ರಿ ಪರಿಹಾರದ ನಿಧಿಗೆ ಶಿರಾಲಿಯ ಗಣೇಶ್ ಸೋಪ್ಸ್ & ಡಿಟರ್ಜೆಂಟ್ಸ್ ಮಾಲಕರಾದ ಡಿಜೆ ಕಾಮತ್ ಮತ್ತು ಶ್ರೀನಿವಾಸ್ ಕಾಮತ್ ಒಂದು ಲಕ್ಷದ ಹತ್ತು ಸಾವಿರ ಚೆಕ್ ಹಸ್ತಾಂತರ

ಕರೋನಾ ಸಂಕಷ್ಟ ನಿಭಾಯಿಸಲು ಆರ್ಥಿಕವಾಗಿ ನೆರವಾಗಲು ಅನೇಕರು ಪ್ರಧಾನಮಮತ್ರಿ ಪರಿಹಾರ ನಿಧಿಗೆ ಹಣ ನೀಡುತ್ತಿದ್ದು ಅದರಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯ ಹಲವು ಗಣ್ಯರು ನೀಡುತ್ತಾ ಬಂದಿದ್ದಾರೆ. ಬುಧವಾರ ಭಟ್ಕಳಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಲು ಸಂಸದ ಅನಂತಕುಮಾರ ಹೆಗಡೆ ಪ್ರಥಮ ಬಾರಿಗೆ ಆಗಮಿಸಿದ್ದರು ಇ ಸಂದರ್ಭದಲ್ಲಿ ತಾಲೂಕಿನ ಶಿರಾಲಿಯ ಗಣೇಶ್ ಸೋಪ್ಸ್ & ಡಿಟರ್ಜೆಂಟ್ಸ್ ಇವರ ವತಿಯಿಂದ ಪಿ. ಎಮ್ ಕೇರ್ ನಿಧಿಗೆ ಒಂದು ಲಕ್ಷದ ಹನ್ನೊಂದು ಸಾವಿರದ ಒಂದುನೂರ ಹನ್ನೊಂದು ರೂಪಾಯಿ ದೇಣಿಗೆಯನ್ನು ಹಸ್ತಾಂತರಿಸಿದರು. ಶಾಸಕ ಸುನೀಲ ನಾಯ್ಕ, ಮಾಲಕರಾದ ಡಿಜೆ ಕಾಮತ್ ಮತ್ತು ಶ್ರೀನಿವಾಸ್ ಕಾಮತ್ ಉಪಸ್ಥಿತರಿದ್ದರು

error: