
ಹೊನ್ನಾವರ: ದೇಶದ್ಯಂತ ಕರೋನಾ ಸುರಕ್ಷತೆಗಾಗಿ ಲಾಕ್ ಡೌನ್ ಘೋಷಣೆ ಬಳಿಕ ಕರೋನಾ ವಾರಿಯರ್ಸಆಗಿ ದಿನವೀಡಿ ಶ್ರಮ ವಹಿಸುವ ಹೊನ್ನಾವರ ಪಟ್ಟಣ ಭಾಗದ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೌರ ಕಾರ್ಮಿಕರಿಗೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಬುಧವಾರ ಕಿಟ್ ವಿತರಿಸಿದರು.
ಪಟ್ಟಣ ಪಂಚಾಯತ ಸಭಾಭವನದಲ್ಲಿ ಐವತ್ತು ಅಧಿಕ ವಾರಿಯರ್ಸ ಕಿಟ್ ವಿತರಣೆ ಬಳಿಕ ಮಾತನಾಡಿ ಕೊರೋನಾ ತಡೆಗೆ ಜಾರಿಯಾದ ಲಾಕ್ ಡೌನ್‌ನಿಂದ ಎಲ್ಲರೂ ಗೃಹಬಂಧನದಲ್ಲಿದ್ದರೆ, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮಾತ್ರ ತಮ್ಮ ಜೀವದ ಹಂಗನ್ನು ತೊರೆದು ಸಾರ್ವಜನಿಕರಲ್ಲಿ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಜನ ಸಾಮಾನ್ಯರ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವ ಮೂಲಕ ಕೊರೋನಾ ವಿರುದ್ಧ ಸೈನಿಕರಂತೆ ಹೋರಾಡುತ್ತಿದ್ದಾರೆ. ಈ ಕೊರೋನಾ ಸೈನಿಕರಿಗೆ ನೆರವು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ದಿವಂಗತ ಮೋಹನ ಕೆ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕಿಟ್ ವಿತರಿಸುತ್ತಾ ಬಂದಿದ್ದು ಕುಮುಟ ಮತ್ತು ಹೊನ್ನಾವರ ತಾಲೂಕಿನವರಿಗೆ ವಿತರಣೆ ಮಾಡುತ್ತಿದ್ದೆವೆ. ನಾವು ನೀಡುವ ಕಿಟ್ ನಿಮಗೆ ಸಂಪೂರ್ಣ ಸಹಕಾರಿಯಾಗದಿದ್ದರು ನಿಮ್ಮ ಸೇವೆ ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ ಎಂದರು. ಅಲ್ಲದೇ ಪೌರ ಕಾರ್ಮಿಕರು ಪ್ರತಿದಿನ ಕರೋನಾ ಭೀತಿಯ ನಡುವೆ ಪಟ್ಟಣದೆಲ್ಲಡೆ ಸಂಚರಿಸಿ ನಮ್ಮ ಪಟ್ಟಣವನ್ನು ಸ್ವಚ್ಚ ಮಾಡಲು ಪರಿಶ್ರಮಿಸುತ್ತಿದ್ದಾರೆ. ಈ ಹಿಂದಿನಿAದಿಲೂ ಅವರೊಂದಿಗೆ ನಾನಿದ್ದು ಮುಂದೆಯೂ ಅವರ ಸಂಕಷ್ಟಕ್ಕೆ ಸಹಾಯ ಮಾಡಲಿದ್ದೇನೆ ಎಂದರು
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಮಾತನಾಡಿ ಅನೇಕ ಸಂಘಟನೆ, ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದು ಇದು ನಮ್ಮಗೆ ಕತ್ಯರ್ವ ನಿರ್ವಹಿಸಲು ಇನ್ನಷ್ಟು ಸಂತಸವಾಗುತ್ತಿದೆ. ಅಲ್ಲದೇ ನೂತನ ಆದೇಶದ ಪ್ರಕಾರ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಟ್ಟಣ ಪ್ರದೇಶದಲ್ಲಿ ಮಧ್ಯಾಹ್ನ೧ ಗಂಟೆ ಒಲಗೆ ದಿನನಿತ್ಯದ ಸಾಮಗ್ರಿ ಕೊಂಡುಕೊಳ್ಳಿ ಜಿಲ್ಲಾಧಿಕಾರಿ ಆದೇಶವನ್ನು ಪಲಿಸುವಮತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಟಾಸ್ಕಪೊರ್ಸ ಸಮಿತಿ ಅಧ್ಯಕ್ಷ ವಿನಾಯಕ ಶೇಟ್ ಹಳದೀಪುರ, ಪಟ್ಟಣ ಪಂಚಾಯತ ಸದಸ್ಯೆ ಜೊಸ್ಪಿನ್ ಡಯಾಸ್, ರವಿಕುಮಾರ ಶೆಟ್ಟಿ, ರೋಟರಿ ಅಧ್ಯಕ್ಷ ದಿನೇಶ ಕಾಮತ ಉಪಸ್ಥಿತರಿದ್ದರು.
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು