April 26, 2024

Bhavana Tv

Its Your Channel

ಕರೋನಾ ಸಂದರ್ಭದಲ್ಲಿಯೂ ಹಿಂದಿನ ಚಾಳಿಯಂತೆ ಕರ್ತವ್ಯಕ್ಕೆ ಹಾಜರಾಗದ ಪಂಚಾಯತ ಅಭಿವೃದ್ದಿ ಅಧಿಕಾರಿ ಅಮಾನತು.

ಹೊನ್ನಾವರ: ತಾಲೂಕಿನ ಚಂದಾವರ ಪಂಚಾಯತ ಅಭಿವೃದ್ದಿ ಅಧಿಕಾರಿ ಕೃಷ್ಣಾನಂತ ಟಿ. ನಾಯ್ಕ ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಮಾಡಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಅತಿಸೂಕ್ಷö್ಮ ಪ್ರದೇಶವಾಗಿರುವ ಚಂದಾವರ ಗ್ರಾಮ ಪಂಚಾಯತಿಯಲ್ಲಿ ಕರೋನಾ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೇ ಇರುವುದರ ಜೊತೆ, ಗ್ರಾಮ ಪಂಚಾಯತಿಗೂ ಸರಿಯಾಗಿ ಹಾಜರಾಗದೇ ಕರ್ತವ್ಯ ಲೋಪ ಮಾಡುತ್ತಿದ್ದರು. ಅಲ್ಲದೇ ಈ ಹಿಂದಿನಿAದಲೂ ೧೪ನೇ ಹಣಕಾಸು ಯೋಜನೆಯಅನುದಾನದ ಕಾಮಗಾರಿ, ಮಹಾತ್ಮ ಗಾಂದಿ ರಾಷ್ಟಿçÃಯü ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನದಲ್ಲಿ ವಿಳಂಬ ತೆರಿಗೆ ವಸೂಲಿಯಲ್ಲಿ ನಿರಿಕ್ಷೀತ ಪ್ರಗತಿ ಸಾಧಿಸಿರಲಿಲ್ಲ. ಕರೋನಾ ಸಂದರ್ಭದಲ್ಲಿ ಅವಶ್ಯಕ ಪೂರೈಕೆ ಮಾಡದೇ ನಿಲಕ್ಷ ತೋರುವ ಜೊತೆ ತಾಲೂಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಅಲ್ಲದೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದರೂ ಸಮರ್ಪಕ ಉತ್ತರ ನೀಡಿರಲಿಲ್ಲ. ಅಲ್ಲದೇ ಅಧ್ಯಕ್ಷರಿಂದಲೂ ಕಾರ್ಯವೈಖರಿ ಬಗ್ಗೆ ಅಸಮಧಾನದ ಬಗ್ಗೆ ಪತ್ರ ಬಂದಿರುದರಿAದ ತಾಲೂಕ ಕಾರ್ಯನಿರ್ವಹಣಾಧಿಕಾರಿಗಳಾದ ಕರೀಂ ಅಸದಿ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದರು. ಇದನ್ನು ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ತೆರವಾದ ಸ್ಥಾನಕ್ಕೆ ಹೆಚ್ಚುವರಿಯಾಗಿ ಸಾಲ್ಕೊಡ್ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಎ ಪಟಗಾರ ಇವರಿಗೆ ಹೆಚ್ಚುವರಿಯಾಗಿ ನಿಭಾಹಿಸುವಂತೆ ತಾಲೂಕ ಕಾರ್ಯನಿರ್ವಹಣಾಧಿಕಾರಿಗಳು ಆದೇಶಿಸಿದ್ದಾರೆ.

error: