November 30, 2023

Bhavana Tv

Its Your Channel

ಈಗಿನ ಚುನಾಯಿತ ಸಮಿತಿಗಳನ್ನೇ ಮುಂದುವರಿಸಿ.ಆಡಳಿತಾಧಿಕಾರಿಗಳ ನೇಮಕ ಬೇಡ. ಒಕ್ಕೂಟದಿಂದ ಹಕ್ಕೊತ್ತಾಯ. ಚಂದ್ರಕಾOತ ಕೊಚರೇಕರ.

ಕೊವಿಡ್ ೧೯ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ತುರ್ತು ಸ್ಥಿತಿಯನ್ನು ಹೇರಿರುವ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಲು ನಿರ್ಧರಿಸಿರುವದು ಸ್ವಾಗತಾರ್ಹ.ಆದರೆ ಚುನಾವಣೆ ನಡೆಯುವ ಅವಧಿಯವರೆಗೂ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಬದಲಿಗೆ ಈಗಿನ ಚುನಾಯಿತ ಆಡಳಿತ ಸಮಿತಿಗಳನ್ನೇ ಮುಂದುವರಿಸುವ ಅಥವಾ ಚುನಾಯಿತ ಸದಸ್ಯರನ್ನೇ ಮುಂದಿನ ಅವಧಿಗೆ ಮರುನಾಮಕರಣ ಮಾಡುವ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಹೊನ್ನಾವರ ತಾಲ್ಲೂಕು ಒಕ್ಕೂಟದ ಸಂಚಾಲಕ ಚಂದ್ರಕಾoತ ಕೊಚರೇಕರ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.ಅವರು ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿದ್ದು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಕೆ. ಎಸ್. ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ರವರನ್ನು ವಿನಂತಿಸಿದ್ದಾರೆ.

error: