April 23, 2024

Bhavana Tv

Its Your Channel

ಚಿಲ್ಲಿಸ್ ದಾಬ ಮಾಲೀಕನಿಂದ ತಾಲೂಕು ಆಸ್ಪತ್ರೆಯ ವೈದ್ಯಕೇತರ ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ.

ಹೊನ್ನಾವರ :ಹೊನ್ನಾವರ ಕರ್ಕಿನಾಕಾದ ಬಳಿ ಚಿಲ್ಲಿಸ್ ದಾಬದ ಮೂಲಕ ತಮ್ಮ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿರುವ ವಿಲಿಯಮ್ ಅಲಮೇಡಾ ಎನ್ನುವವರು ಲಾಕ್ ಡೌನ್‌ನಿಂದ ತಮ್ಮ ಹೋಟೇಲ್ ಬಂದ್ ಇದ್ದರೂ ತಮ್ಮ ಊರಿನಲ್ಲಿ ಕಡುಬಡವರನ್ನು ಗುರುತಿಸಿ ಆಹಾರ ಧಾನ್ಯವನ್ನು ಪೂರೈಸಿದ್ದರು. ಅಲ್ಲದೇ ಕರೋನಾ ವಾರಿಯರಸ್‌ಆಗಿ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆಯರಿಗೆ ಆಹಾರ ಪೂರೈಸಿ ಮಾನವಿಯತೆ ಮೆರಿದಿದ್ದರು. ಕಳೆದ ವಾರ ಹೋಟೆಲ್‌ನಲ್ಲಿ ಪಾರ್ಸಲ್ ಸೇವೆಯನ್ನು ಆರಂಭಿಸಿದರು ಕೆಲವು ದಿನದ ಹಿಂದೆ ಪೋಲಿಸರಿಗೆ ಊಟವಿತರಿಸಿದರು. ಇಂದು ತಮ್ಮ ಜೀವದ ಹಂಗು ತೊರೆದು ಶ್ರಮ ವಹಿಸುವ ಕರೋನಾ ವಾರಿಯರಸ್ ಎಂದು ಹೇಳಲಾಗುತ್ತಿರುವ ತಾಲೂಕಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯೆತರ ಸಿಬ್ಬಂದಿಗಳಿಗೆ ಮಧ್ಯಾಹ್ನ ಊಟವನ್ನು ತಮ್ಮ ಸ್ನೇಹಿತರ ಜೊತೆಗೆ ಆಗಮಿಸಿ ವಿತರಿಸಿದರು ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೂ ಊಟವನ್ನು ವಿತರಿಸುವ ಭರವಸೆ ನೀಡಿದ್ದಾರೆ,
ಈ ಸಂದರ್ಭದಲ್ಲಿಚಿಲ್ಲಿಸ್ ಫ್ಯಾಮಲಿ ದಾಬದ ಹೋಟೆಲ್ ಉದ್ಯಮಿ ವಿಲಿಯಮ್ ಅಲಮೇಡಾ ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತಾ, ಮಾಜಿ ಅಧ್ಯಕ್ಷ ಸದಾನಂದ ಭಟ್,ಬಿಜೆಪಿ ಮುಖಂಡರಾದ ಉಮೇಶ ನಾಯ್ಕ, ಬಾಲಕೃಷ್ಣ ಬಾಳೇರಿ, ಪರಮೇಶ್ವರ ನಾಯ್ಕ ಹಳದಿಪುರ, ದೀಪಕ್ ಶೇಟ್, ಪೀಟರ್ ಮೆಂಡಿಸ್ ಉಪಸ್ಥಿತರಿದ್ದರು.

error: