March 21, 2023

Bhavana Tv

Its Your Channel

ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದ ಶಾಸಕ ಸುನೀಲ ನಾಯ್ಕ.

ಕರೋನಾ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ಹಿನ್ನಲೆಯಲ್ಲಿ ಯಾವುದೇ ಭಾಗದಲ್ಲಿ ಕರಾವಳಿಯ ಗಂಡುಮೆಟ್ಟಿದ ಕಲೆಯಾದ ಯಕ್ಷಗಾನ ಪ್ರದರ್ಶನವಾಗುತ್ತಿರಲಿಲ್ಲ ಇದರಿಂದ ಸಂಕಷ್ಟದಲ್ಲಿರುವ ೮೦ಕ್ಕೂ ಅಧಿಕ ಕಲಾವಿದರಿಗೆ ಗುಣವಂತೆ ಕೆರಮನೆ ಶಿವರಾಮ ಹೆಗಡೆ ಕಲಾಮಂದಿರದಲ್ಲಿ ಶಾಸಕ ಸುನೀಲ ನಾಯ್ಕ ದಿನಸಿ ಕಿಟ್ ಮತ್ತು ಸಹಾಯಧನ ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ, ಕೆರಮನೆ ಶಿವಾನಂದ ಹೆಗಡೆ, ಪ್ರಭಾಕರ ಚಿಟ್ಟಾಣಿ, ರಮೇಶ ಭಂಡಾರಿ, ಈಶ್ವರ ನಾಯ್ಕ ಮಂಕಿ, ನಿಲ್ಕೋಡ್ ಶಂಕರ ಹೆಗಡೆ, ಅಶೋಕ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜೇಶ ಭಂಡಾರಿ, ಶಂಭು ಗೌಡ, ಸುರೇಶ ಖಾರ್ವಿ ಪ್ರಮುಖರು ಉಪಸ್ತಿತರಿದ್ದರು.

About Post Author

error: