December 22, 2024

Bhavana Tv

Its Your Channel

ಪಟ್ಟಣದ ಕರೋನಾ ವಾರಿಯರ್ಸಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿದ ಬಾಳೇರಿ ಸ್ನೇಹಿತರು,

ಹೊನ್ನಾವರ: ಹೊನ್ನಾವರದ ಮಾಜಿ ಪಟ್ಟಣ ಪಂಚಾಯತ ಸದಸ್ಯ ಬಾಲಕೃಷ್ಣ ಬಾಳೇರಿ ನೇತ್ರತ್ವದಲ್ಲಿ ಸಮಾನ ಮನಸ್ಸಿನ ಸಾಮಾಜಿಕ ಕಾರ್ಯಕರ್ತರು ಒಟ್ಟಾಗಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗೆ ವಿತರಿಸಿದರು
ತಾಲೂಕಿನ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗಳಾದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ತಾಲೂಕು ಆಡಳಿತ, ಪಟ್ಟಣ ಪಂಚಾಯತಿ ಸಿಬ್ಬಂದಿ, ಪೊಲೀಸ್ ಹಾಗೂ ಪೌರ ಕಾರ್ಮಿಕರಿಗೆ ಬುಧವಾರ ಮಧ್ಯಾಹ್ನ ಭೋಜನ ವ್ಯವಸ್ಥೆ ಕಲ್ಪಿಸಿ ಗೌರವಿಸಿದರು.
ಈ ಸಂದರ್ಬದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಸದಾನಂದ ಭಟ್ಟ
ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಬಾಲಕೃಷ್ಣ ಬಾಳೇರಿ, ಬಳಗದ ಸದಸ್ಯರಾದ ಎಂ.ಎಸ್.ಹೆಗಡೆ, ಉಮೇಶ ನಾಯ್ಕ, ಉಮೇಶ ಮೇಸ್ತ, ಸುಬ್ರಾಯ ನಾಯ್ಕ ಮಂಕಿ, ಶಿವರಾಜ ಮೇಸ್ತ, ಸುಬ್ರಹ್ಮಣ್ಯ ಶಾಸ್ತಿç, ಎಂ.ಜಿ.ಭಟ್ಟ, ದೀಪಕ ಶೇಟ್, ಉಮೇಶ ತಾಂಡೇಲ್, ಚಂದನ ಪ್ರಭು, ಪರಮೇಶ್ವರ ನಾಯ್ಕ, ವಿನಾಯಕ ಆಚಾರಿ, ವೈದ್ಯರಾದ ಡಾ. ಆಶಿಕ್ ಹೆಗ್ಡೆ, ಡಾ. ಮಂಜುನಾಥ ಶೆಟ್ಟಿ ಮತ್ತಿತರರು ಭೋಜನವನ್ನು ವಿತರಿಸಿದರು.

error: