November 26, 2023

Bhavana Tv

Its Your Channel

ಭಟ್ಕಳದ ಜತೆ ಕುಮಟಾದಲ್ಲಿ ಖಾತೆ ತೆರೆದ ಕೊರೋನಾ.

ಕಾರವಾರ: ಕುಮಟಾ ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢ. ಆ ಮೂಲಕ ಕುಮಟಾದ ಜನತೆಗೂ ಈಗ
ಕೊರೊನೋಘಾತವಾಗಿದೆ . ಇಂದು ಬೆಳಿಗ್ಗಿನ ಬುಲೆಟಿನ್‌ನಲ್ಲಿ ಉತ್ತರಕನ್ನಡದಲ್ಲಿ ೨ ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೇ ೫ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ವಾಪಸ್ಸಾಗಿದ್ದ ವ್ಯಕ್ತಿಯು, ಎಲ್ಲೂ ತಿರುಗಾಡದೆ ತಪಾಸಣೆಗೆ ಒಳಗಾಗಿ ನೇರವಾಗಿ ಬಂದು ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನಲ್ಲಿ ತೆರೆಯಲಾಗಿದ್ದ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ. ವ್ಯಕ್ತಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಕೋವಿಡ್- ೧೯ ಇರುವುದು ದೃಢವಾಗಿದೆ. ಈತ ಕ್ವಾರಂಟೈನ್‌ನಲ್ಲಿದ್ದವರೊoದಿಗೂ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಇದೀಗ ಅವನೊಂದಿಗೆ ಕ್ವಾರಂಟೈನ್ ಆದವರಲ್ಲೂ ಆತಂಕ ಹೆಚ್ಚಾಗಿದೆ. ಈತನೊಂದಿಗೆ ಕ್ವಾರಂಟೈನ್ ನಲ್ಲಿದ್ದ ಇನ್ನು ಕೆಲವರು ತಮ್ಮ ಕ್ವಾರಂಟೈನ್ ಅವಧಿ ಮುಗಿಸಿ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದರು
ಎನ್ನಲಾಗಿದೆ.ಈತನಲ್ಲಿ ಸೋಂಕು ದೃಢಪಟ್ಟಿದ್ದರಿಂದ ಕುಮಟಾದಲ್ಲಿ ಕೊರೋನಾ ತನ್ನ ಮೊದಲ ಖಾತೆ ತೆರೆದಂತಾಗಿದೆ. ಈಗ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ಕೊರೋನ ಭಟ್ಕಳದಲ್ಲಿ ಖಾತೆ ಮುಂದುವರಿಸಿದ್ದು ಎರಡೂವರೆ ವರ್ಷದ ಮಗುವಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ಭಟ್ಟಳದಲ್ಲಿ 40 ಹಾಗೂ ಕುಮುಟಾದಲ್ಲಿ 1 ಪ್ರಕರಣ ಸೇರಿ ಉತ್ತರಕನ್ನಡದಲ್ಲಿ 41 ಪ್ರಕರಣ ದಾಖಲಾದಂತಾಗಿದೆ

error: