June 15, 2024

Bhavana Tv

Its Your Channel

ಪೊಲೀಸರಿಗೆ ಸದ್ಯ ಟೆಂಟ್ ವ್ಯವಸ್ಥೆಯೊಂದಿಗೆ ನೆರಳಿನಡಿಯಲ್ಲಿ ಕುಳಿತು ಕೆಲಸ ಮಾಡಲು ವ್ಯವಸ್ಥೆ

ಭಟ್ಕಳ: ಕಳೆದ ಮೂರು ಹಂತದ ಲಾಕ್ ಡೌನ್ ನಲ್ಲಿ ಸತತ ಬಿಸಿಲು ಮಳೆಯೆನ್ನದೇ ಜನರ ಓಡಾಟಕ್ಕೆ ಭಟ್ಕಳದಲ್ಲಿ ಕಡಿವಾಣ ಹಾಕಿದ ಪೊಲೀಸರಿಗೆ ಸದ್ಯ ಟೆಂಟ್ ವ್ಯವಸ್ಥೆಯೊಂದಿಗೆ ನೆರಳಿನಡಿಯಲ್ಲಿ ಕುಳಿತು ಕೆಲಸ ಮಾಡಲು ಪೊಲೀಸ್ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿದೆ.

ಒಂದು ಹಂತದಲ್ಲಿ ಕೋರೋನಾ ಭಟ್ಕಳ ಜನರನ್ನು ಕಂಗಾಲಾಗಿದ್ದು, ಬಳಿಕ ೧೧ ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದರು. ಇದಾದ ಬಳಿಕ ಸತತ ೪ ದಿನದಲ್ಲಿ ೭ ರಂತೆ ೨೮ ಪ್ರಕರಣ ಬಂದಿದ್ದು ಜನರನ್ನು ಬೆಚ್ಚಿಬಿಳಿಸಿದೆ. ಈ ನಡುವೆ ಜನರ ಓಡಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸಾಕಷ್ಟು ಕಷ್ಟ ಪಟ್ಟಿದ್ದು, ಬಿಸಿಲು ಬೆಂಕಿಯೆನ್ನದೇ ಕೆಲಸ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯ ಕಂಟೈನ್ ಮೆಂಟ್ ವಲಯ ಸೇರಿದಂತೆ ಹಾಟ್ ಸ್ಪಾಟ್ ಕ್ಲಸ್ಟರ ವಲಯದ ಮುಖ್ಯ ರಸ್ತೆಯಲ್ಲಿ ಪೊಲೀಸರು ನೆರಳಿನಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶ್ಯಾಮಿಯಾನ ಹಾಗೂ ಕುರ್ಚಿ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿನ ಸಂಶುದ್ದೀನ್ ಸರ್ಕಲನ ೨ ಕಡೆ, ಜಾಲಿ ಕ್ರಾಸ್, ಗುಡ್ ಲಕ್ ರಸ್ತೆ, ಹಳೆ ಬಸ್ ನಿಲ್ದಾಣಗಳಲ್ಲಿ ಪೊಲೀಸರು ಬಿಗಿ ಬ್ಯಾರಿ ಗೇಟ್ ಹಾಕಿ ನಾಕಾ ಬಂದಿ ಮಾಡಲಾಗಿದ್ದು, ಎಲ್ಲಾ ಕಡೆ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪೋಲಿಸರು ಸಂತಸಗೊAಡಿದ್ದು ನೆರಳು ಸಿಕ್ಕಿದ್ದಕ್ಕೆ ಕ್ರತಜ್ಞರಾಗಿದ್ದಾರೆ.

ಇನ್ನು ನಾಳೆ ಬಂದರ್ ರಸ್ತೆ, ತೆಂಗಿನಕುAಡಿ ಕ್ರಾಸ್ ಹಾಗೂ ಇನ್ನು ಕೆಲವು ಕಡೆ ಟೆಂಟ್ ವ್ಯವಸ್ಥೆ ಮಾಡಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ತಿಳಿಸಿದ್ದಾರೆ.

error: