ಹೊನ್ನಾವರ; ಕರೋನಾ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ಬಳಿಕ ಸಭೆ ಸಮಾರಂಭಗಳು ನಡೆಯದೇ ಇರುದರಿಂದ ಹಲವು ಉದ್ಯಮಗಳು ಸಂಕಷ್ಟ ಅನುಭವಿಸಿದ್ದವು. ಇದರಲ್ಲಿ ಪ್ರಮುಖವಾಗಿ ಶಾಮಿಯಾನ್ ಹಾಗೂ ಪ್ರೋಟೊಗ್ರಾಫರ್ ವೃತ್ತಿ ನಂಬಿ ಜೀವನ ನಡೆಸುತ್ತಿದ್ದವರು ದಿಕ್ಕು ತೋಚದಂತೆ ಇರುವ ಸಮಯದಲ್ಲಿ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಕಾರ್ಮಿಕ ಇಲಾಖೆಯ ಸಹಯೋಗದಿಂದ ಕಿಟ್ ಖರೀದಿಸಿ ಶುಕ್ರವಾರ ಮೂಡಗಣಪತಿ ಸಭಾಭವನದಲ್ಲಿ ವಿತರಿಸಿದರು.
ತಾಲೂಕಿನ ಶಾಮೀಯಾನದ ೭೬ ಮಾಲೀಕರು ಹಾಗೂ ೧೮೫ ಶಾಮೀಯಾನದ ಕಾರ್ಮಿಕರು ಹಾಗೂ ೮೨ ಪೋಟೋಗ್ರಾಫರ್ ವಿಡೀಗ್ರಾಫರ್ ವೃತ್ತಿಯವರಿಗೆ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪೋಟೊಗ್ರಾಫರ್ ಮತ್ತು ಶಾಮಿಯಾನದವರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಯಾವುದೇ ಸಮಾರಂಭ ನಡೆದರೂ ಒಬ್ಬರನ್ನು ಬಿಟ್ಟು ಇನ್ನೊರ್ವರು ಇರಲು ಸಾಧ್ಯವಿಲ್ಲ. ಆದರೆ ಇಂದು ಈ ಎರಡು ವೃತ್ತಿಬಾದಂವರು ತೀರಾ ಸಮಸ್ಯೆಯಲ್ಲಿದ್ದಾರೆ. ಇದನ್ನು ಮನಗಂಡು ದಿನಸಿ ಕಿಟ್ ವಿತರಿಸುತ್ತಿದ್ದೇನೆ. ಅಲ್ಲದೇ ಮುಖ್ಯಮಂತ್ರಿಗಳ ಜೊತೆ ನಿಮ್ಮ ಸಮಸ್ಯೆ ಬಗ್ಗೆ ಈಗಾಗಲೇ ಚರ್ಚಿಸಿದ್ದು, ಮುಂದಿನ ದಿನದಲ್ಲಿ ನಿಮ್ಮ ಬೇಡಿಕೆ ಈಡೇರಿಸಲು ಹಾಗೂ ಸಂಕಷ್ಟಕ್ಕೆ ನೆರವಾಗಲು ನಿಯೋಗ ಕರೆದೊಯ್ಯಲು ಸಿದ್ದ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ವಿಜು ಕಾಮತ್, ಶ್ರೀಪಾದ ನಾಯ್ಕ, ಸುರೇಶ ಹೊನ್ನಾವರ, ಬಿಜೆಪಿ ಮುಖಂಡರಾದ ಉಮೇಶ ನಾಯ್ಕ, ಎಂ.ಜಿ.ನಾಯ್ಕ, ಸುಬ್ರಾಯ ನಾಯ್ಕ, ಲೋಕೇಶ ಮೇಸ್ತ, ಎರಡು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.