
ಹೊನ್ನಾವರ: ಕರೋನಾ ಸಂಕಷ್ಟದ ನಡುವೆ ಸಹಕಾರಿ ಸಂಘದ ಸಾಲಮರುಪಾವತಿ ಮಾಡಲು ರೈತರಿಂದ ಸಾಧ್ಯವಿಲ್ಲ. ಈಗ ಹೊರಡಿಸಿರುವ ಆದೇಶ ವಾಪಸ್ಸು ಪಡೆದು ರೈತರ ನೆರವಿಗೆ ಸರ್ಕಾರ ಧಾವಿಸಬೇಕೆಂದು ಹೊನ್ನಾವರದಲ್ಲಿ ಸಹಕಾರಿ ಸಂಘಗಳ ಅಧ್ಯಕ್ಷರುಗಳು ಕೆ.ಡಿ.ಸಿ.ಸಿ ನಿರ್ದೇಶಕ ಶಿವಾನಂದ ಹೆಗಡೆ ನೇತೃತ್ವದಲ್ಲಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗದೇ ಕಂಗಲಾಗಿದ್ದ ರೈತರಿಗೆ ಸಹಕಾರಿ ಸಂಘಗಳು ಹೊಸ ಶಾಕ್ ನೀಡಿದ್ದವು. ಅದೆನೆಂದರೆ ಸಹಕಾರಿ ಸಂಘಗಳಲ್ಲಿ ರೈತರು ಪಡೆದ ಬೆಳೆಸಾಲವನ್ನು ಮೇ ೩೦ರ ಒಳಗೆ ಮರುಪಾವತಿ ಮಾಡಬೇಕು ಮೇ ಅಂತ್ಯದ ಬಳಿಕ ಬಡ್ಡಿ ಸೇರಿಸಿ ತುಂಬಬೇಕಾಗುತ್ತದೆ ಎಂದು ನೋಟಿಸ್ ಎಲ್ಲಾ ಸಹಕಾರಿ ಕೇಂದ್ರದಲ್ಲಿ ನೋಟಿಸ್ ಅಂಟಿಸಲಾಗಿತ್ತು. ಇದರ ವಿರುದ್ದ ರೈತರು ಆಕ್ರೋಶ ಕೂಡಾ ವ್ಯಕ್ತಪಡಿಸುತ್ತಿದ್ದರು. ಈ ಬೆನ್ನಲ್ಲೆ ಸಹಕಾರಿ ಸಂಘಗಳ ಅಧ್ಯಕ್ಷರುಗಳು ಕೆ.ಡಿ.ಸಿ.ಸಿ ನಿರ್ದೇಶಕ ಶಿವಾನಂದ ಹೆಗಡೆ ರೈತರ ಪರವಾಗಿ ನಿಲ್ಲಲ್ಲು ಮುಂದಾಗಿದ್ದಾರೆ
ಸಂಕಷ್ಟದ ಸಮಯದಲ್ಲಿ ರೈತರು ಸಾಲ ಮರುಪಾವತಿಸಲು ಮುಂದಾದರೂ ಸಹಕಾರಿ ಸಂಘದ ಕಛೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಇದರಿಂದ ಕೋವಿಡ್ ೧೯ ಹರಡುವುದಕ್ಕೆ ಅವಕಾಶವಾಗುವ ಸಾಧ್ಯತೆಯೂ ಅಧಿಕವಾಗಿದೆ. ರೈತರು ಪಡೆದ ಬೆಳೆ ಸಾಲಕ್ಕೆ ಯಾವುದೇ ಬಡ್ಡಿ ಪಡೆಯಲಾಗುವುದಿಲ್ಲ ಹಾಗೂ ಸಾಲ ತುಂಬಿಸಿಕೊAಡರೂ ವಾರ ಅಥವಾ ಹದಿನೈದು ದಿನದಲ್ಲಿ ಮತ್ತೆ ಸಾಲ ನೀಡಬೇಕಾಗಿದೆ. ಬಡ್ಡಿ ಇಲ್ಲದ ಹಾಗೂ ಸರ್ಕಾರಕ್ಕೆ ಯಾವುದೇ ಹೊರೆಯಾಗದ ಹಿನ್ನಲೆಯಲ್ಲಿ ಬೆಳೆಸಾಲವನ್ನು ಮುಂದಿನ ಒಂದು ವರ್ಷದ ಅವಧಿಗೆ ನವೀಕರಿಸಿ ಕೊಡುವಂತೆ ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ರೈತರು ತಾವು ಪಡೆದ ಕೃಷಿ ಮದ್ಯಮಾವಧಿ ಸಾಲವನ್ನೂ ಮರುಪಾವತಿಸುವುದು ಕಷ್ಟಕರವಾದ ಕಾರಣ ಈಗಾಗಲೇ ವಿತರಿಸಿದ ಕೃಷಿ ಮದ್ಯಮಾವಧಿ ಸಾಲದ ಮರುಪಾವತಿ ಅವಧಿಯನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಿದರೆ ರೈತರಿಗೂ ಅನೂಕುಲವಾಗಲಿದೆ. ಸರ್ಕಾರದ ಆದೇಶ ಸಂಖ್ಯೆ ಸಿ.ಓ ೧೦೯ ಸಿ.ಎಲ್.ಎಸ್ ೨೦೧೯ ಮಾರ್ಚ ೩೦ -೨೦೨೦ ರ ಪ್ರಕಾರ ಗರಿಷ್ಠ ೩ ಲಕ್ಷಗಳವರೆಗೆ ಶೂನ್ಯ ಬಡ್ಡಿದರ ಅನ್ವಯವಾಗುವಂತೆ ಅಲ್ಪಾವಧಿ ಕೃಷಿ ಸಾಲ ನೀಡುವ ಯೋಜನೆಗೆ ಕೆಲ ಷರತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ರೈತರನ್ನು ವರ್ಗೀಕರಿಸಿದಂತಾಗುತ್ತದೆ. ಬೆಳೆ ಬೆಳೆಯುವುದು ಫಲ ದೊರೆಯುವುದು ಮತ್ತು ನಷ್ಟವಾಗುವುದು ಯಾವುದೇ ಜಾತಿ, ಧರ್ಮ, ಬಡವ, ಬಲ್ಲಿದ ಎಂಬುದನ್ನು ಅವಲಂಬಿಸಿರುವುದಿಲ್ಲ ಹಾಗಾಗಿ ರೈತರ ವರ್ಗೀಕರಣ ನೀತಿಯನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ. ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ದೇಶದೆಲ್ಲಡೆಯಂತೆ ನಮ್ಮ ರಾಜ್ಯವು ಸಂಕಷ್ಟದಲ್ಲಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಕಂಗಲಾಗಿದ್ದಾರೆ. ಅಲ್ಲದೇ ಈಗ ಮರುಪಾವತಿ ಮಾಡಿಸುದಾದರೆ ಬ್ಯಾಂಕಿನಲ್ಲಿ ಸಾಮಾಜಿಕ ಅಂತರ ಕಷ್ಟವಾಗುತ್ತದೆ. ಇದಲ್ಲದೇ ಬೆಳೆ ಸಾಲಕ್ಕೆ ಯಾವುದೇ ಬಡ್ಡಿಯನ್ನು ಹಾಕುವುದಿಲ್ಲ. ಅವರು ಮೇ ೩೦ ರೊಳಗೆ ಸಾಲವನ್ನು ಮರುಪಾವತಿಸಿದರೂ ಜೂನ್ ಮೊದಲ ವಾರದಲ್ಲಿ ಪುನ: ಸಾಲ ನೀಡಬೇಕು. ಬೆಳೆ ಸಾಲವನ್ನು ಒಂದು ವರ್ಷದ ಅವಧಿಗೆ ವೀಕರಿಸಿಕೊಡುವುದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಸರ್ಕಾರ ನಮ್ಮ ಮನವಿಯನ್ನು ಪರಿಶೀಕಲಿಸಿ ರೈತರ ನೆರವಿಗೆ ಧಾವಿಸಬೇಕಿದೆ ಎಂದರು.ವಿ.ಎಸ್.ಎಸ್.ಅಧ್ಯಕ್ಷರುಗಳಾದ ಗೋವಿಂದ ಎಸ್.ನಾಯ್ಕ, ಗಣಪಯ್ಯ ಕೆ ಗೌಡ, ಟಿ.ಎಸ್.ಹೆಗಡೆ, ಆರ್.ಪಿ.ನಾಯ್ಕ, ತಿಲಕ.ಜೆ.ಗೌಡ, ಹರಿಯಪ್ಪ ನಾಯ್ಕ, ದಯಾನಂದ ಹೆಗಡೆ, ಚಂದ್ರಶೇಖರ ಗೌಡ ಹನುಮಂತ ಜಿ ನಾಯ್ಕ, ಹಾಜರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.