April 27, 2024

Bhavana Tv

Its Your Channel

ಜಿಲ್ಲೆಗೆ ಹೊರಗಿನಿಂದ ಬಂದ ೭೯೫ ಜನರು ಹೊನ್ನಾವರ ಕ್ವಾರಂಟೈನ್‌ನಲ್ಲಿ.

ಹೊನ್ನಾವರ; ಕರೋನಾ ಮಹಮಾರಿಯಿಂದ ರಕ್ಷಣೆ ಪಡೆಯಲು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಉದ್ಯೋಗಕ್ಕಾಗಿ ಹೋದವರು ಮತ್ತೆ ತವರಿನತ್ತ ಆಗಮಿಸುತ್ತಿರುದರಿಂದ ೭೯೫ಜನರು ೧೪ ದಿನಗಳ ಕಾಲ ಇವರನ್ನು ವೈದ್ಯಕೀಯ ತಪಾಸಣೆ ನಡೆಸಿ ವಿವಿಧ ಮಾದರಿಯ ಕ್ವಾರಂಟೈನನಲ್ಲಿ ಇಡಲು ತಾಲೂಕ ಆಡಳಿತ ಸೂಚಿಸುತ್ತಿದೆ. ಇವರಲ್ಲಿ ನೆರೆರಾಜ್ಯ ಮಹಾರಾಷ್ಟದಿಂದ ಬಂದವರನ್ನು ಗುರುತಿಸಿ ಹೋಟೇಲ್ ಮತ್ತು ಹಾಸ್ಟೆಲ್ ಕ್ವಾರಂಟೈನ್ ಇಡುವ ಮೂಲಕ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ.
ನೆರೆಯ ಜಿಲ್ಲೆಯಿಂದ ಆಗಮಿಸಿದ ೭೫೬ ಜನ ಅವರವರ ಮನೆಯಲ್ಲಿ, ನೆರೆ ರಾಜ್ಯದಿಂದ ಆಗಮಿಸಿದ ೧೬ಜನ ಹೊಟೇಲ್‌ನಲ್ಲಿ ಮತ್ತು ಹಾಸ್ಟೆಲ್‌ಗಳಲ್ಲಿ ೨೩ ಜನ ಉಳಿದುಕೊಂಡಿದ್ದಾರೆ. ಹಾಸ್ಟೆಲ್‌ಗಳಲ್ಲಿ ಉಳಿದವರ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಹೊಟೆಲ್‌ಗಳಲ್ಲಿ ಉಳಿದುಕೊಂಡವರ ವೆಚ್ಚವನ್ನು ಸ್ವತಃ ಶರ್ವಜನಿಕರು ಭರಿಸತಕ್ಕದ್ದು. ಮಹಾರಾಷ್ಟ ಸಿಂಧದುರ್ಗದಿ0ದ ಗೋವಾ ಮಾರ್ಗವಾಗಿ ಬಂದವರನ್ನು ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ತಡೆಹಿಡಿಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಇದಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಇವರು ಭಟ್ಕಳ ಉಪವಿಭಾಗಾಧಿಕಾರಿಯಿಂದ ಪರವಾನಿಗೆ ಪಡೆಯುವಾಗ ಗೋವಾದಿಂದ ಬಂದಿದ್ದರು ಎಂಬ ದಾಖಲೆ ನೀಡಿದ ಕಾರಣ ತಾಂತ್ರಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಾರಾಷ್ಟ ಸಿಂಧದುರ್ಗ ಕೊಂಕಣಭಾಗ ಮತ್ತು ಗೋವಾ ಭಾಗಗಳಲ್ಲಿ ಮೀನುಗಾರಿಕೆಗಾಗಿ ಬೋಟ್‌ನಲ್ಲಿ ಕೆಲಸಮಾಡಲು ಜಿಲ್ಲೆಯಿಂದ ಸಾವಿರಾರು ಕಾರ್ಮಿಕರು ಹೋಗಿದ್ದು ಹೊನ್ನಾವರದಿಂದ ೫೦೦ರಷ್ಟು ಕಾರ್ಮಿಕರು ಇದರಲ್ಲಿ ಇರುವುದರಿಂದ ಇವರೆಲ್ಲರು ಈಗ ತವರಿನತ್ತ ಆಗಮಿಸುತ್ತಿದ್ದಾರೆ. ಬಹುಪಾಲು ಅಶಿಕ್ಷಿತರಾದ ಇವರ ಜೊತೆ ಸುಶಿಕ್ಷಿತರು ಇಲ್ಲಸಲ್ಲದ ಕ್ಯಾತೆ ತೆಗೆಯುದರಿಂದ ಕ್ವಾರಂಟೈನ್ ಒಳಪಡಿಸುವುದು ಆಡಳಿತಕ್ಕೆ ಸವಾಲಾಗಲಿದೆ. ಈ ಅವಧಿಯಲ್ಲಿ ಸರ್ಕಾರ ಪರವಾನಿಗೆ ಮತ್ತು ವೈದ್ಯಕೀಯ ತಪಾಸಣೆ, ಕ್ವಾರಂಟೈನ್ ಎಲ್ಲ ವ್ಯವಸ್ಥೆ ಮಾಡಿದ್ದರೂ ಕೊರೊನಾ ಪೀಡಿತರು ನುಸುಳಿ ಬರುವ ಸಾಧ್ಯತೆ ಇದ್ದು ಸಾರ್ವಜನಿಕರು ಇನ್ನೆರಡು ವಾರ ಹೆಚ್ಚು ಕಾಳಜಿ ವಹಿಸಬೇಕಾಗಿರುವುದು ಅನಿವಾರ್ಯವಾಗಿದೆ. ಕ್ವಾರಂಟೈನ್‌ನಲ್ಲಿ ಇದ್ದವರು ಯಾವುದೇ ಕಾರಣಕ್ಕೆ ಹೊರಗೆ ಬರಬಾರದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ತಹಶೀಲ್ದಾರ ವಿವೇಕ ಶೇಣ್ವಿ ತಿಳಿಸಿದ್ದಾರೆ.

error: