February 14, 2025

Bhavana Tv

Its Your Channel

ಹೋಮ್‌ಗಾರ್ಡ್ಸ ಮತ್ತು ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿದ ಮಾಜಿ ಶಾಸಕ ಮಂಕಾಳ ವೈದ್ಯ

ಹೊನ್ನಾವರ: ದೇಶಾದ್ಯಂತ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದವರನ್ನು ಗುರುತಿಸಿ ಅವರ ನೆರವನ್ನು ನೀಡುವು ಕೆಲಸವನ್ನು ಮುಂದುವರಿಸಿರುವ ಭಟ್ಕಳ ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಗುರುವಾರ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಎಸ್ ನಾಯ್ಕ, ತಾ.ಪಂ ಸದಸ್ಯ ಅಣ್ಣಯ್ಯ ನಾಯ್ಕ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ರವಿ ಶೆಟ್ಟಿ ಕವಲಕ್ಕಿ, ರಾಘವೇಂದ್ರ ನಾಯ್ಕ, ರಾಜೇಂದ್ರ ನಾಯ್ಕ, ಮುಖಂಡರಾದ ಐ.ವಿ ನಾಯ್ಕ, ಭಾಸ್ಕರ ನಾಯ್ಕ, ಅನಂತ ನಾಯ್ಕ, ರಾಜು ನಾಯ್ಕ ಮಂಕಿ ಮುಂತಾದವರು ಉಪಸ್ಥಿತರಿದ್ದರು.

error: