ಹೊನ್ನಾವರ: ಪಟ್ಟಣದ ೮೫ ಕ್ಕೂ ಅಧಿಕ ಮಂದಿ ಕ್ವಾರಂಟೈನ್ ಮಾಡಲಾಗುತ್ತಿದ್ದು ಸರ್ಕಾರಿ ವಸತಿನಿಲಯ ಹಾಗೂ ಹೋಟೆಲಗಳಲ್ಲಿ ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಅಲ್ಲಿ ಭರ್ತಿಯಾಗುತ್ತಿದ್ದಂತೆ ಹೊಸ ಸ್ಥಳ ಹುಡುಕಲು ಆರಂಭಿಸಿದ್ದರು. ಪಟ್ಟಣದ ಗಾಂಧಿನಗರದ ಪುರಭವನ ಗಮನಕ್ಕೆ ಬಂದು ಸ್ಥಳ ಪರಿಶೀಲನೆಗೆ ಬಂದಾಗ ನೂರಾರು ಸಾರ್ವಜನಿಕರು ಸ್ಥಳಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಈ ಪ್ರದೇಶದಲ್ಲಿ ಸುತ್ತಮುತ್ತಲು ಮನೆಗಳಿವೆ. ಆವರಣದ ಒಳಗಡೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಇದೆ. ಶೌಚಾಲಯದ ವ್ಯವಸ್ಥೆ ಇಲ್ಲ, ಕೋಠಡಿ ಒಳಗಡೆ ಧೂಳು ಹಾಗೂ ಕಸಕಡ್ಡಿಗಳಿಂದ ತುಂಬಿದೆ ಇಂತಹ ಸ್ಥಳದಲ್ಲಿ ಅವರನ್ನು ಕರೆತಂದರೆ ಸುತ್ತಲು ಇರುವಂತಹ ಅವರ ಜೊತೆ ನಮ್ಮ ಆರೊಗ್ಯದ ಮೇಲೂ ಪರಿಣಾಮ ಬೀರುತ್ತದೆ ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ ಎಂದರು.
ಕೇವಲ ಪರಿಶೀಲನೆಗೆ ಎಂದು ಬಂದಿದ್ದೇವೆ ಎಂದು ತಹಶೀಲ್ದಾರ ಮತ್ತು ಆಟಳಿಯ ವೈದ್ಯಾಧಿಕಾರಿಗಳು ಸಮಜಾಯಸಿ ನೀಡಲು ಯತ್ನಿಸಿದರು ಸಾರ್ವಜನಿಕರು ಆಕ್ರೂಶ ಮುಂದುವರೆಸಿದ್ದರು. ಅಧಿಕಾರಿಗಳೂ ತೆರಳಿದ ಬಳಿಕ ಗೇಟಿನ ಮುಂಭಾಗದಲ್ಲಿ ಕಲ್ಲು ಮುಳ್ಳುಗಳನ್ನು ಹಾಕಿ ಸಂಪೂರ್ಣ ಸೀಲ ಡೌನ್ ರೀತಿಯಲ್ಲಿ ಸಾರ್ವಜನಿಕರೇ ಸ್ಥಳವನ್ನು ಬಂದ್ ಮಾಡಿದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.