September 18, 2024

Bhavana Tv

Its Your Channel

ರೈತ ವಿರೋಧಿ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ಭಾರತೀಯ ಕಮ್ಯೂನಿಸ್ಟ ಪಕ್ಷದ ವತಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಹೊನ್ನಾವರ: ಕರೋನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು ಬಡವರು,ಕೃಷಿಕರು, ಮಹಿಳೆಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇವರನ್ನು ಆರ್ಥಿಕ ಸಂಕಷ್ಟದಿ0ದ ಪಾರು ಮಾಡುವ ಕಾರ್ಯ ಮಾಡದೇ ಹೊಸ ಆದೇಶ ಹೊರಡಿಸಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕಾರ್ಯ ಮಾಡುತ್ತಿದ್ದಾರೆ. ಎ.ಪಿ.ಎಂ.ಸಿ ಕಾಯ್ದೆಗೆ ಸುಗ್ರಿವಾಜ್ಙೆ ಹೊರಡಿಸಿ ಕಾರ್ಪೋರೆಟ್ ಕಂಪನಿಗೆ ಲೂಟಿ ಮಾಡಲು ಅವಕಾಶ ಕಲ್ಪಿಸಿದೆ. ಗ್ರಾಮ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸಿರುವುದು ಎಲ್ಲಿಯೂ ಇರಲಿಲ್ಲ ಅಗತ್ಯವಿದ್ದಲ್ಲಿ ಅಧಿಕಾರಿಗಳನ್ನು ನೇಮಸಲಿ, ಇಲ್ಲದಿದ್ದರೆ ಈಗ ಇರುವ ಸದಸ್ಯರನ್ನು ಚುನಾವಣೆಗೆ ಮುಂದುಡಲಿ. ಸಚೀವರು ಆಡಳಿತ ಸಮಿತಿ ರಚಿಸುತ್ತೇವೆ ಎಂದು ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಇದು ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ಅಲ್ಲದೆ ಈಗ ಟಾಸ್ಕ ಪೋರ್ಸ ಸಮಿತಿಯಲ್ಲಿ ಸದಸ್ಯರು ಇದ್ದು ಶ್ರಮಿಸುತ್ತಿದ್ದಾರೆಇದನ್ನು ಪರಿಶೀಲನೆ ಮಾಡಬೇಕು. ಕಾರ್ಮಿಕರು ದುಡಿಮೆಯ ಅವಧಿಯನ್ನು ೮ ಗಂಟೆಯಿoದ ೧೨ಗಂಟೆಗೆ ಹೆಚ್ಚಿಸುವ ಮೂಲಕ ಮಾಲೀಕರಿಗೆ ಅನೂಕೂಲ ಕಲ್ಪಿಸಲು ಮುಂದಾಗಿದ್ದಾರೆ. ಲಾಕ್ ಡೌನ್ ಹಿನ್ನಲೆಯಲ್ಲಿ ಮುಂದಿನ ಮೂರು ತಿಂಗಳ ಕಾಲ ಸಮಗ್ರ ಆಹಾರ ಧಾನ್ಯ ಹೊಂದಿದ ಪಡಿತರ ವಿತರಿಸಲು ಮುಂದಾಗಬೇಕು. ರೈತರಿಗೆ ಬೆಳೆನಷ್ಟವಾಗುವ ಜೊತೆ ನಿರುದ್ಯೋಗ ತಲೆದೂರಿದೆ ಪ್ರತಿ ಎಕರೆಗೆ ೧೦ ಸಾವಿರ ಸಹಾಯಧನ ನೀಡಬೇಕು. ಉದ್ಯೋಗವಿಲ್ಲದ ಯುವ ಸಮುದಾಯಕ್ಕೆ ಮಾಸಿಕ ಭತ್ಯೆ ನೀಡಬೇಕು. ಉದ್ಯೋಗ ಖಾತ್ರಿಯಡಿ ರಾಜ್ಯಂದ್ಯoತ ಉದ್ಯೋಗ ಸಮಸ್ಯೆ ಬಗೆಹರಿಸಲು ಮುಂದಾಗುವoತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ತಹಶೀಲ್ದಾರ ವಿವೇಕ ಶೆಣ್ವಿ ಮನವಿ ಸ್ವೀಕರಿಸಿದರು.
ತಾಲೂಕ ಕಾರ್ಯದರ್ಶಿ ತಿಲಕ ಗೌಡ ನಂತರ ಮಾತನಾಡಿ ಕೇಂದ್ರ ರಾಜ್ಯ ಸರ್ಕಾರ ಕರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ರೈತರು ಸೇರಿದಂತೆ ಹಲವರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ತೀರಾ ಸಂಕಷ್ಟ ಎದುರಾಗಿದೆ. ಪ್ರಮುಖ ೮ ಬೇಡಿಕೆ ಮುಂದಿಟ್ಟು ನಾವು ಮನವಿ ಸಲ್ಲಿಸಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸದೇ ಹೋದಲ್ಲಿ ರಾಜ್ಯದೆಲ್ಲಡೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ಪ್ರಮುಖರಾದ ತಿಮ್ಮಪ್ಪ ಗೌಡ, ಗಣೇಶ ಭಂಡಾರಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು

error: