December 22, 2024

Bhavana Tv

Its Your Channel

ಹೊನ್ನಾವರದಲ್ಲಿ ಸುವ್ಯವಸ್ಥಿತ ಕ್ವಾರಂಟೈನ್ ನಡೆಸಲು ವಿಫಲವಾದ ಇಲಾಖೆ; ಸಾರ್ವಜನಿಕರಿಂದ ಅಸಮಧಾನ


ಹೊನ್ನಾವರ; ಹೊರರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಿ ಸುರಕ್ಷತೆಯ ದೃಷ್ಟಿಯಿಂದ ಕ್ವಾರಂಟೈನ್ ಮಾಡಬೇಕಾಗಿರುವುದು ಸ್ಥಳಿಯ ಆಡಳಿತ ಜವಬ್ದಾರಿಯಾದರೂ, ಇದುವರೆಗೂ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಕಳೆದ ಕೆಲ ದಿನಗಳ ಹಿಂದೆ ಮುಂಬೈನಿ0ದ ಆಗಮಿಸಿದ ವ್ಯಕ್ತಿ ಸರ್ಕಾರಿ ಕ್ವಾರೈಂಟಿನ್ ಸ್ಥಳಕ್ಕೆ ನಡೆದುಕೊಂಡು ಬಂದಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಎಚ್ಚೆತ್ತುಕೊಂಡು ಮತ್ತೆ ಅಂತಹ ತಪ್ಪು ಆಗದಂತೆ ನೋಡಿಕೊಂಡಿದ್ದರು. ಆದರೆ ಇದೀಗ ಬುಧವಾರ ರಾತ್ರಿ ಬಂದು ಆಸ್ಪತ್ರೆ ಟೆಸ್ಟ ಮಾಡಿಸಿಕೊಂಡವನು ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸರ್ಕಾರಿ ಆಸ್ಪತ್ರೆಯ ಹೊರಾಂಗಣದಲ್ಲಿ ಕುಳಿತಿದ್ದಾರೆ. ಕಾರಣ ಇಷ್ಟೆ ಇವರಿಗೆ ಅಂಬುಲೆನ್ಸ ಅಥವಾ ಇತರೆ ವಾಹನದ ವ್ಯವಸ್ಥೆ ಇಲ್ಲದೇ ಈ ಸಮಸ್ಯೆ ಉದ್ಬವಿಸಿದೆ. ಈ ಬಗ್ಗೆ ಮುತವರ್ಜಿ ವಹಿಸಬೇಕಾದ ತಾಲೂಕ ಆಡಳಿತ ಈ ವ್ಯವಸ್ಥೆ ಕಲ್ಪಿಸದೇ ನಿಲಕ್ಷ ವಹಿಸಿದೆ. ಮುಂಬೈನಿ0ದ ಆಗಮಿಸಿದವರು ಕುಳಿತು ಬೇಸರಗೊಂಡು ಸುತ್ತಲು ವಾಕ್ ಮಾಡಿದ್ದಾರೆ. ಆಸ್ಪತ್ರೆಗೆ ಬಂದ ಸ್ಥಳಿಯರು ಇದನ್ನು ಗಮನಿಸಿ ಭಯಗೊಂಡಿದ್ದಾರೆ. ಅಧಿಕಾರಿಗಳು ನಿಲಕ್ಷ ವಹಿಸುತ್ತಿದ್ದಾರೆ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಿಯಾಡಳಿತದ ಗಮನಕ್ಕೆ ತಂದಾಗ ಅಧಿಕಾರಿಗಳು ಬಂದರು ಇಲಾಖೆಯ ವಾಹನದ ಮೂಲಕ ಕ್ವಾರಂಟೈನ್ ಸ್ತಳಕ್ಕೆ ಕರೆದುಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಮುಂಬೈನ0ಟು ಹೊಂದಿರುವ ಐದು ಪಾಸಟಿವ್ ಪ್ರಕರಣ ಪತ್ತೆಯ ಬಳಿಕವು ಎಚ್ಚೆತ್ತುಕೊಂಡು ಅಲ್ಲಿಂದ ಬರುವವರ ಮೇಲೆ ನಿಗಾ ವಹಿಸಬೇಕಿದ್ದ ಇಲಾಖೆ ಪದೇಪದೇ ನಿಲಕ್ಷವಹಿಸುತ್ತಿರುವುದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
………………….
ಮುಂಬೈನಿ0ದ ಬರುವವರ ತಾಲೂಕ ಆಸ್ಪತ್ರೆಯಲ್ಲಿ ಟೆಸ್ಟ ಮಾಡಿದ ಬಳಿಕ ಕ್ವಾರಂಟೈನಗೆ ರವಾನಿಸಲಾಗುತ್ತಿದೆ. ಅಂಬುಲೆನ್ಸ ಬೇರೆಡೆ ಹೋಗುವದರಿಂದ ಇದರ ಬಳಕೆಗೆ ಸ್ವಲ್ಪ ಸಮಸ್ಯೆ ಉದ್ಬವಿಸಿದೆ. ನಾಳೆಯಿಂದ ಇಲಾಖೆಯ ಒಂದು ವಾಹನ ಇದಕ್ಕಾಗಿಯೇ ಮೀಸಲಿಡುವ ಮೂಲಕ ಸಮಸ್ಯೆ ಉಂಟಾಗದ0ತೆ ಗಮನಹರಿಸುತ್ತೇವೆ.
ತಾಲೂಕ ದಂಡಾದಿಕಾರಿ ವಿವೇಕ ಶೇಣ್ವಿ
…………………………………..

error: