
ಕುಮಟಾ : ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶಿವರಾಮ ಹೆಬ್ಬಾರ ಅವರನ್ನು ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಭೇಟಿಯಾಗಿ ಮೀನುಗಾರರ ಸಾಲಮನ್ನಾದಲ್ಲಿ ಉತ್ತರ ಕನ್ನಡದ ಮೀನುಗಾರರಿಗೆ ಸಮಾನ ಅವಕಾಶ, ಮ್ಯಾಕ್ಸಿ ಕ್ಯಾಬ್ (ಟೆಂಪೋ) ಟ್ಯಾಕ್ಸ್ ಸಾಲಮನ್ನಾ ಮಾಡುವಂತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಡತೋಕ ಇಲ್ಲಿ ಖಾಲಿ ಇರುವ ಹೆರಿಗೆ ತಜ್ಞರನ್ನು ನೇಮಿಸುವ ಕುರಿತು ಮನವಿ ಸಲ್ಲಿಸಿದರು
ಸರ್ಕಾರ ಈಗಾಗಲೇ ಮೀನುಗಾರರ ಸಾಲ ಮನ್ನಾಕ್ಕಾಗಿ 60 ಕೋಟಿಯಷ್ಟು ಅನುದಾನ ನೀಡಿರುತ್ತದೆ, ಆದರೆ ಸುಮಾರು 57.5 ಕೋಟಿಯಷ್ಟು ಅನುದಾನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಉಪಯೋಗವಾಗುತ್ತಿದ್ದು, ಕರಾವಳಿಯ ಪ್ರಮುಖ ಜಿಲ್ಲೆಯಾದ ನಮ್ಮ ಉತ್ತರ ಕನ್ನಡದ ಮೀನುಗಾರರಿಗೆ ಇದರಿಂದ ಅತೀ ಕಡಿಮೆ ಉಪಯೋಗವಾಗುತ್ತಿದೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗಷ್ಟೇ ಈ ಸೌಲಭ್ಯ ದೊರೆಯುತ್ತಿದ್ದು, ನಮ್ಮ ಜಿಲ್ಲೆಯ ಹೆಚ್ಚಿನ ಮೀನುಗಾರರು ಸಂಘ ಸಂಸ್ಥೆ, ಸೊಸೈಟಿಗಳಲ್ಲಿ ಸಾಲ ಮಾಡಿ, ಈ ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದ್ದರಿಂದ 30 ಕೋಟಿಯಷ್ಟು ಅನುದಾನವನ್ನು ನಮ್ಮ ಜಿಲ್ಲೆಯ ಮೀನುಗಾರರಿಗೆ ಮೀಸಲಿಟ್ಟು ಪ್ರತಿಯೊಬ್ಬ ಮೀನುಗಾರರ ಸಾಲಮನ್ನಾ ಮಾಡಬೇಕು.ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕ-ಮಾಲಕರು ಮನವಿಮಾಡಿಕೊಂಡಂತೆ, ಕೊವಿಡ್-19 ನಿಂದ ಅವರ ಜೀವನಾವಸ್ಥೆ ಹದಗೆಟ್ಟಿದ್ದು, ಉತ್ಪನ್ನವಿಲ್ಲದೇ ವಾಹನ ಸಾಲವನ್ನೂ ಕೂಡ ತುಂಬಲಾಗದ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ 6 ತಿಂಗಳುಗಳ ವರೆಗು ವಾಹನ ಸಾಲ , ಟ್ಯಾಕ್ಸ್ ಮತ್ತು ಇನ್ಸುರೆನ್ಸ ಮನ್ನಾ ಮಾಡಬೇಕಾಗಿದೆ.ಪ್ರಾಥಮಿಕ ಆರೋಗ್ಯ ಕೇಂದ್ರ ಕಡತೋಕ ಇದು 2017 ರಲ್ಲಿ ಜಡ್ಡಿಗದ್ದೆಯಲ್ಲಿ ಉದ್ಘಾಟನೆಗೊಂಡಿದ್ದು, ಸುಮಾರು16000 ದಷ್ಟು ಜನಸಂಖ್ಯೆ ಇರುವ ಚಂದಾವರ, ಕಡತೋಕ, ನವಿಲಗೋಣ ಪಂಚಾಯತ್ ವ್ಯಾಪ್ತಿಯ ಜನ ಇಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ ಇಲ್ಲಿ ಹೆರಿಗೆ ತಜ್ಞರು ಇಲ್ಲದ ಕಾರಣ ಚಿಕಿತ್ಸೆಗಾಗಿ ದೂರದ ಹೊನ್ನಾವರ ಅಥವಾ ಕುಮಟಾಕ್ಕೆ ತೆರಳಬೇಕಾಗುತ್ತದೆ. ಆದ್ದರಿಂದ ಇಲ್ಲಿ ಒಬ್ಬರು ಹೆರಿಗೆ ತಜ್ಞರನ್ನು ನೇಮಿಸಬೇಕಾಗಿದೆ ಎಂದು ಮನವಿಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ್ ಎಂ. ಶೆಟ್ಟಿ, ವಿ.ಎಲ್. ನಾಯ್ಕ, ಸುರೇಖಾ ವಾರೇಕರ್, ವಿನು ಜಾರ್ಜ್ , ಸಂತೋಷ ನಾಯ್ಕ, ನಿತ್ಯಾನಂದ ನಾಯ್ಕ ಹಾಜರಿದ್ದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.