

ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಳಗಿನೂರು ನೂತನವಾಗಿ ನಿರ್ಮಾಣವಾಗಿರುವ ಒಕ್ಕಲಿಗರ ಸಮುದಾಯ ಭವನವನ್ನ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಮಠದ ೭೨ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ವೇಳೆ ಶಾಖಾ ಮಠದ ಪ್ರಶನ್ನನಾಥ ಸ್ವಾಮಿಜಿ ದಿಕ್ಸೂಚಿ ಮಾತುಗಳನ್ನಾಡಿದರು. ಈ ಕಲ್ಯಾಣ ಮಂಟಪ ಅಡಿಗಲ್ಲು ಹಾಕುವ ವೇಳೆ ತೀರ್ಮಾನಿಸಿದಂತೆ ಎರಡು ವರ್ಷದಲ್ಲಿ ಮುಗಿಸಲಾಗಿದೆ. ಕಲ್ಯಾಣ ಮಂಟಪ ಹಾಕಿದ ನಂತರ ಈ ಭಾಗದಲ್ಲಿ ಸಾಕಷ್ಟು ಸಂಘಟನೆ ಆಗಿದೆ. ಸಮುದಾಯ ಜನರು ಭವನ ನಿರ್ಮಾಣಕ್ಕೆ ಸಾಕಷ್ಟು ಸಹಾಯ ನೀಡಿದ್ದಾರೆ, ದಾನಿಗಳು ಸಹಾಯ ಮಾಡಿದ್ದಾರೆ. ಎಲ್ಲರ ಸಹಾಯದಿಂದಾಗಿ ಇಂದು ಈ ಕಲ್ಯಾಣಮಂಟಪ ಸ್ಥಾಪನೆಯಾಗಿದೆ. ಎಲ್ಲರನ್ನು ಒಂದು ಕಡೆ ಸೇರಿಸಿಕೊಂಡು ಹೋಗುವ ಕೆಲಸವಾಗಬೇಕಿದೆ ಎಂದರು.






ಇದೆ ಸಂದರ್ಭದಲ್ಲಿ ಸಾಧಕರಿಗೆ, ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಪದ್ಮಶ್ರೀ ತುಳಸಿ ಗೌಡ, ಸ್ಥಳದಾನ ಮಾಡಿದ ಮಹಾದೇವಿ ಗೌಡ, ಸಮುಧಾಯ ಭವನ ಸ್ಥಾಪನೆಗೆ ಹಿಂದಿನ ಸರಕಾರದಲ್ಲಿ ಅನುದಾನ ಬಿಡುಗಡೆ ಮಾಡಿಸಿದ ಮಾಜಿ ಶಾಸಕ ಮಂಕಾಳು ವೈದ್ಯ ಹಾಗೂ ಮಾಜಿ ಅಧ್ಯಕ್ಷ ದಿ||ಎಮ್.ಹೆಚ್.ಗೌಡರ ಪತ್ನಿಯನ್ನು ಸನ್ಮಾನಿಸಲಾಯಿತು.
ಯುವ ಪತ್ರಕರ್ತ ಲಕ್ಷ್ಮೀಕಾಂತ ಗೌಡ ಸಂಪಾದಕತ್ವದಲ್ಲಿ ಹೊರತರಲಾದ ಹೊನ್ನ ಹರಿವಾಣ ಸ್ಮರಣ ಸಂಚಿಕೆಯನ್ನ ಶ್ರೀರಾಮ ಕ್ಷೇತ್ರದ ಧರ್ಮಸ್ಥಳ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಲೋಕಾರ್ಪಣೆ ಮಾಡಲಾಯಿತು.
ಶ್ರೀ ಆತ್ಮಾನಂದ ಸ್ವಾಮೀಜಿ, ಶ್ರೀರಾಮ ಕ್ಷೇತ್ರದ ಧರ್ಮಸ್ಥಳ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ, ಸ್ಥಳೀಯ ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ, ಕರವೆ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಶಂಕರ ಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,