March 28, 2025

Bhavana Tv

Its Your Channel

ದೀರ್ಘಾವಧಿ ಬಳಿಕ ಶಿರಸಿ ಮಾರಿಕಾಂಬಾ ದೇವಾಲಯ ಓಪನ್; ಜಿಲ್ಲೆಯ ಇತರೆ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ಮಾತ್ರ ಅವಕಾಶ

ಕಾರವಾರ: ಇಂದಿನಿಂದ ದೇವಾಲಯ ತೆರೆಯಲು ಸರಕಾರ ಅನುಮತಿ ನೀಡಿದ್ದು, ಕಳೆದ ಎರಡು ತಿಂಗಳಿಂದ ದೇವರ ಪೂಜೆ- ಪುನಸ್ಕಾರ ನೋಡದ ಭಕ್ತರು ಇಂದು ಪೂಜೆ ಪುನಸ್ಕಾರ ಕಣ್ತುಂಬಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ದೇವಾಲಯಗಳಲ್ಲಿ ಇವತ್ತು ಷರತ್ತುಬದ್ಧವಾಗಿ ದೇವರ ದರ್ಶನ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿಯ ಮಾರಿಕಾಂಬೆ ದೇವಾಲಯ, ಗೋಕರ್ಣದ ಮಹಾಬಲೇಶ್ವರ ದೇವಾಲಯ, ಮುರ್ಡೇಶ್ವರ ದೇವಾಲಯ ಸೇರಿ ಬಹುತೇಕ ದೇವಾಲಯಗಳು ಇವತ್ತು ಸರಕಾರದ ಮಾರ್ಗಸೂಚಿಯಂತೆ ತೆರೆದಿವೆ.

ಸರಕಾರದ ಮಾರ್ಗಸೂಚಿಯಂತೆ ಇವತ್ತು ದೇವಾಲಯ ತೆರೆಯಲಾಗಿದ್ದು, ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಯಿತು. ಹಲವು ತಿಂಗಳ ಬಳಿಕ ಭಕ್ತರು ದೇವಾಲಯದ ದೇವರ ದರ್ಶನ ಪಡೆದರು. ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಥರ್ಮಲ್‌ ಸ್ಕ್ರೀನಿಂಗ್ ‌ಮಾಡಲಾಗಿತ್ತು, ಮಾಸ್ಕ್ ಧರಿಸದೆ ಬಂದವರಿಗೆ ದೇವಾಲಯದ ಒಳಗಡೆ ಅವಕಾಶ ನಿಷೇಧಿಸಲಾಗಿತ್ತು. ಇವತ್ತು ಶಿರಸಿ ಮಾರಿಕಾಂಬೆ ದೇವಾಲಯಕ್ಕೆ ಬರುವ ಭಕ್ತರಿಗೆ ದೇವಾಲಯದ ಒಳಗಡೆ ಹೋಗುವ ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಬಳಿಕ ಕೈಗೆ ಸ್ಯಾನಿಟೈಸರ್ ಹಾಕಲಾಯಿತು. ಮಾಸ್ಕ್ ಕಡ್ಡಾಯವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಶಿರಸಿಯ ಮಾರಿಕಾಂಬಾ ದೇವಾಲಯ ಸೇರಿ ಜಿಲ್ಲೆಯ ಪ್ರಸಿದ್ದ ದೇವಾಲಯದಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಇವತ್ತಿನಿಂದ ಹದಿನೈದು ದಿನಗಳ‌ವರೆಗೆ ಸ್ಥಳೀಯ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬರುವ ಪ್ರತಿಯೊಬ್ಬ ಭಕ್ತನಿಗೂ ಇಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ, ಮುರ್ಡೇಶ್ವರ ದೇವಾಲಯದಲ್ಲೂ ಕೂಡ ಸಾಮಾಜಿಕ ಅಂತರ ಕಾಪಾಡಿ ಸರಕಾರದ ಮಾರ್ಗಸೂಚಿಯಂತೆ ನಿಯಮ ಅನುಸರಿಸಲಾಯಿತು. ರಾಜ್ಯ ಹಾಗೂ ಹೊರ ರಾಜ್ಯದಿಂದ ಅಧಿಕವಾಗಿ ಬರುವ ಶಿರಸಿ ಮಾರಿಕಾಂಬ ಮತ್ತು ಗೋಕರ್ಣ ಮಹಾಬಲೇಶ್ವರ , ಮುರ್ಡೇಶ್ವರ ದೇವಾಲಯದಲ್ಲಿ ಇವತ್ತು ಸರಕಾರದ ಮಾರ್ಗಸೂಚಿಯಂತೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಬಂದ ಭಕ್ತರು ಎರಡು ತಿಂಗಳ ಬಳಿಕ ದೇವರ ದರ್ಶನ ಪಡೆದು ಪೂಜೆ ಪುನಸ್ಕಾರ‌ ಕಣ್ತುಂಬಿಕೊಂಡರು.

Source:- News 18 Kannada

error: