
ಭಟ್ಕಳ: ತಾಲೂಕಿನ ಬಹುವರ್ಷದ ಸಮಸ್ಯೆಗೆ ಇದೀಗ ಮುಕ್ತಿ ದೊರೆತಿದ್ದು, ಸಮಸ್ಯೆ ಗಮನಕ್ಕೆ ಬಂದಾಕ್ಷಣ ಬಗೆಹರಿಸಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ಸರಿಸುಮಾರು ೨೦ ಸಾವಿರ ಕಾರ್ಮಿಕರು ನೊಂದಣಿ ಮಾಡಿಕೊಂಡಿದ್ದು, ಇನ್ನೂ ೩೦ ಸಾವಿರಕ್ಕೂ ಅಧಿಕ ಕಾರ್ಮಿಕರು ನೊಂದಣಿ ಮಾಡಿಕೊಳ್ಳಲಿದ್ದಾರೆ, ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಪಡೆಯಲು ನೀಡಿದ ಹಲವಾರು ಅರ್ಜಿಗಳು ವಿಲೇವಾರಿ ಆಗದೇ ಕಛೇರಿಯಲ್ಲೇ ಉಳಿದಿದ್ದು, ಇನ್ನೂ ಮುಂದೆ ಯಾವ ಕಾರ್ಮಿಕರ ಅರ್ಜಿಗಳು ಭಟ್ಕಳ ಕಾರ್ಮಿಕ ಇಲಾಖೆಯಲ್ಲಿ ಧೂಳು ತಿನ್ನಬಾರದು ಎಂಬ ಉದ್ದೇಶದಿಂದ ಭಟ್ಕಳ ಕಾರ್ಮಿಕ ಇಲಾಖೆಗೆ ಪ್ರತಿ ವಾರದಲ್ಲಿ ಮೂರು ದಿನಕ್ಕೆ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಎಂದು ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಅಧಿಕಾರಿಗಳಿಗೆ ಖಡಕ್ ಆದೇಶ ಜಾರಿ ಮಾಡಿದ್ದಾರೆ. ಇದರಿಂದ ಕಾರ್ಮಿಕ ಇಲಾಖೆಯ ನೊಂದಾವಣೆ ವಿಳಂಬ ಕೊನೆಯಾಗಲಿದೆ.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ