March 25, 2024

Bhavana Tv

Its Your Channel

10ನೇ ವರ್ಷದ ಶಿವರಾತ್ರಿ ಪಾದಯಾತ್ರೆ ಸಾವಿರಕ್ಕೂ ಅಧಿಕ ಭಕ್ತರು ಬಾಗಿ

ಭಟ್ಕಳ:ಇಲ್ಲಿನ ರಂಜನ್ ಇಂಡೇನ್ ಏಜೆನ್ಸಿ ಹಾಗೂ ಸಾಲಗದ್ದೆ ಸ್ಪೋರ್ಟ್ಸ್ ಕ್ಲಬ್ ನೇತೃತ್ವದಲ್ಲಿ ಶಿವರಾತ್ರಿ
ಪ್ರಯುಕ್ತ ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸತತ 10ನೇ ವರ್ಷದ ಪಾದಯಾತ್ರೆಯೂ ಶುಕ್ರವಾರದಂದು ಸಹಸ್ರಾರು ಭಕ್ತರನ್ನೊಳಗೊಂಡಂತೆ ನಡೆಯಿತು. ಈ ಬಾರಿಯ ಪಾದಯಾತ್ರೆಯನ್ನು ಸಾಲಗದ್ದೆ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಆನಂದ ಬಾಳಗಿ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯಕ್ಕಾಗಿ ಈ ವರ್ಷ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು.

ಶುಕ್ರವಾರದಂದು ನಸುಕಿನ ಜಾವ 4 ಗಂಟೆಗೆ ಇಲ್ಲಿನ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ಮುರ್ಡೇಶ್ವರದವರೆಗೆ ಮಹಾಶಿವರಾತ್ರಿಯ ಅಂಗವಾಗಿ ಪಾದಯಾತ್ರೆ  ಆರಂಭವಾಯಿತು. ಹಳೇ ಬಸ್ ನಿಲ್ದಾಣ, ರಂಗೀಕಟ್ಟೆ ಮೂಲಕ ಮುಖ್ಯರಸ್ತೆಯಲ್ಲಿ ಸಂಚರಿಸಿ ಶಿರಾಲಿ ಮೂಲಕ ಮುರ್ಡೆಶ್ವರ ದೇವಸ್ಥಾನಕ್ಕೆ ತೆರಳುವುದು.
ವಿಶೇಷವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತಾದಿಗಳೆಲ್ಲ ಬರಿ ಕಾಲಿನಲ್ಲಿ ಯಾತ್ರೆ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ರಂಜನ್ ಇಂಡೇನ್ ಎಜೆನ್ಸಿ ಮಾಲಕರಾದ ಶಿವಾನಿ ಶಾಂತಾರಾಮ ಭಟ್ಕಳ,ಹಾಗೂ ಶಾಂತಾರಾಮ ಭಟ್ಕಳ ಇವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.ಯಾತೆಯಲ್ಲಿ ಮಹಿಳೆಯರು ಹಾಗೂ ಪುಟಾಣಿ ಮಕ್ಕಳು ಕಂಡು ಬಂದಿರುದು ವಿಶೇಷವೆನಿಸಿತು.
ಯಾತ್ರೆಯ ಕೊನೆಯಲ್ಲಿ ಸಾಲಗದ್ದೆ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಆನಂದ ಬಾಳಗಿ ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯಕ್ಕಾಗಿ ಈ ವರ್ಷ ವಿಶೇಷ ಪ್ರಾರ್ಥನೆ
ಸಲ್ಲಿಸಿದರು. ಯಾತ್ರಿಯಲ್ಲಿ ಪಾಲ್ಗೊಂಡ ಯಾತ್ರಿಗಳಿಗೆ ಲಘು ಉಪಹಾರ ವ್ಯವಸ್ಥೆ ಯನ್ನು ಮುರ್ಡೇಶ್ವರ ದೇವಸ್ಥಾನ ದಿಂದ ವ್ಯವಸ್ಥೆ ಮಾಡಲಾಗಿತ್ತು.ಮತ್ತು ರಂಜನ್ ಇಂಡೇನ್ ಏಜೆನ್ಸಿ ಇದ ವಾಹನ ವ್ಯವಸ್ಥೆ ಮಾಡಲಾಗಿತ್ತು.ಇಲ್ಲಿನ ಮುಟ್ಟಳ್ಳಿ, ಮಣ್ಕುಳಿ ಮುಂಡಳ್ಳಿ,ಹನುಮಾನನಗರ,ಕೋಕ್ತಿ, ತಲಾನ್, ಬೆಳಕೆ ಸೇರಿದಂತೆ ನಗರ ಭಾಗದ ಸಾರ್ವಜನಿಕರು ಪಾದಯಾತ್ರೆಯಲ್ಲಿ ಉಪಸ್ಥಿತರಿದ್ದರು.
ವಿಶೇಷವೆನೆಂದರೆ ಪ್ರತಿ ವರ್ಷಕ್ಕಿಂತ ಈ ವರ್ಷದ ಪಾದಯಾತ್ರೆಗೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿದೆ. ಸುಮಾರು 1000ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

error: