December 22, 2024

Bhavana Tv

Its Your Channel

ಕಡಲ ತೀರದಲ್ಲಿ ದೋಣಿ ಮಗುಚಿ ಒಬ್ಬ ನಾಪತ್ತೆ : ಮತ್ತೊಬ್ಬ ಗಂಭೀರ : ಮೂವರ ರಕ್ಷಣೆ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ದೋಣಿಯೊಂದು ಮಗುಚಿದ ಪರಿಣಾಮ ಓಬ್ಬ ನಾಪತ್ತೆಯಾಗಿದ್ದಾನೆ ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ರವಿವಾರ ರಾತ್ರಿ ಭೀಸಿದ ಭಾರಿ ಗಾಳಿಗೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪಣಂಬೂರು ಸಮೀಪ ಕಡಲಿನಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಂಆರ್‌ಪಿಎಲ್ ಪೈಪ್‌ಲೈನ್ ಕಾಮಗಾರಿಯು ತಣ್ಣೀರುಬಾವಿ ಬಳಿಯ ಕಡಲ ತೀರದಲ್ಲಿ ನಡೆಯುತ್ತಿದೆ.ಉತ್ತರ ಭಾರತ ಮೂಲದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಸುಮಾರು ೮:೩೦ ರ ವೇಳೆಗೆ ಬೀಸಿದ ಬಿರುಗಾಳಿಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ದೋಣಿ ಮಗುಚಿತು ಎನ್ನಲಾಗಿದೆ.
ಈ ದೋಣಿಯಲ್ಲಿ ಐವರು ಕಾರ್ಮಿಕರಿದ್ದರು. ಆ ಪೈಕಿ ಓರ್ವ ನೀರಲ್ಲಿ ನಾಪತ್ತೆಯಾಗಿದ್ದರೆ, ಮೂವರನ್ನು ಇತರರು ರಕ್ಷಿಸಿದ್ದಾರೆ ಎಂದು ತಿಳಿಯಲಾಗಿದೆ. ಅಲ್ಲದೆ ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

error: