December 21, 2024

Bhavana Tv

Its Your Channel

ನೇತ್ರಾವತಿ ನದಿ ದಡದ ಮೇಲೆ ತೇಲಿಬಂದ ಯುವಕನ ಮೃತದೇಹ

ಮಂಗಳೂರು: ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ತೇಲಿಬಂದ ಘಟನೆ ಇಂದು ಸಂಜೆ ಉಳಿಯದಲ್ಲಿ ಬೆಳಕಿಗೆ ಬಂದಿದೆ. ಅಂದಾಜು 25-30ರ ಹರೆಯದ ಯುವಕನ ಶವ ಪತ್ತೆಯಾಗಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹದ ಬಳಿಯಿದ್ದ ವೋಟರ್ ಐಡಿ ಆಧಾರದಲ್ಲಿ ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಸಂಜೀವ ಆಚಾರ್ಯ ಎಂಬವರ ಪುತ್ರ ಚೇತನ್(33) ಮೃತಪಟ್ಟವರು ಎಂದು ಗುರುತು ಪತ್ತೆಹಚ್ಚಲಾಗಿದೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ

error: