May 4, 2024

Bhavana Tv

Its Your Channel

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಎಲ್ಲ ಹೊರರೋಗಿ ವಿಭಾಗಗಳು ಸೋಮವಾರದಿಂದ ಸೇವೆಗೆ ಲಭ್ಯ : ವೈದ್ಯಕೀಯ ಅಧೀಕ್ಷಕರ ಡಾ ಅವಿನಾಶ ಶೆಟ್ಟಿ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಸೋಮವಾರ, ದಿನಾಂಕ ೧೫ನೇ ಜೂನ್ ೨೦೨೦ ರಿಂದ ಜಾರಿಗೆ ಬರುವಂತೆ, ಬೆಳಿಗ್ಗೆ ೮.೦೦ರಿಂದ ಸಂಜೆ ೪.೦೦ರವರೆಗೆ, ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಹಿಂದಿನAತೆ ಸೇವೆಗೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿನೀಡುವ ಪ್ರತಿಯೊಬ್ಬರು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು, ನಂತರ ಸಂಬAಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಪ್ರತೀ ರೋಗಿಗಳೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.
ನಮ್ಮ ಎಲ್ಲಾ ಮಾಹಿತಿ ಕೇಂದ್ರಗಳು ಸಹ ಸೋಮವಾರದಿಂದ ಕಾರ್ಯನಿರ್ವಹಿಸಲಿದ್ದು, ಜನರು ತಮ್ಮ ಊರಿನಲ್ಲಿಯೇ ನೋಂದಣಿ ಮಾಡಿ ಬರಬಹುದು. ಇದರಿಂದ ಆಸ್ಪತ್ರೆಯಲ್ಲಿ ನೋಂದಣಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ಮತ್ತು ಜನದಟ್ಟಣೆ ಸೇರುವುದನ್ನು ಕಡಿಮೆ ಮಾಡಬಹುದು.

error: