
ಮಂಗಳೂರು: ಕಳೆದ ನಾಲ್ಕು ದಿನಗಳಿಂದ ವಾರಿಸುದಾರರಿಲ್ಲದೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಶವವೊಂದನ್ನು, ಸಾಮಾಜಿಕ ಕಾರ್ಯಕರ್ತರು ಹಾಗು ಮುಲ್ಕಿಯ ಸಾರ್ವಜನಿಕರು ಸೇರಿ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಮಂಗಳೂರಿನ ಜಿಲ್ಲಾ ಆಸ್ಪತ್ರೆಯನ್ನು ಕೊರೋನಾ ಕಾರಣದಿಂದಾಗಿ ಕೋವಿಡ್ ಅಸ್ಪತ್ರೆಯನ್ನಾಗಿಸುವ ಸಂದರ್ಭದಲ್ಲಿ, ಅಲ್ಲಿದ್ದ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು.
ಆ ಮುಖೇನ ಮುಲ್ಕಿಯ ಸರಕಾರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಕೆಲವೊಂದು ರೋಗಿಗಳಲ್ಲಿ ಫಾತಿಮ ಎಂಬ ಹೆಸರಿನ ಮಹಿಳೆಯೂ ಸೇರಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ಮಹಿಳೆಯು ಕಳೆದ ನಾಲ್ಕು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಮಹಿಳೆಯ ಶವಕ್ಕೆ ವಾರಿಸುದಾರರು ಇಲ್ಲದ ಕಾರಣ ಮುಲ್ಕಿ ಶವಗಾರದಲ್ಲಿ ಇರಿಸಿದ್ದ ಶವವನ್ನು ಸಾಮಾಜಿಕ ಕಾರ್ಯಕರ್ತರು ಸೇರಿ, ಮುಲ್ಕಿ ನಗರ ಸದಸ್ಯ ಪುತ್ತುಬಾವ ಹಾಗು ಇಬ್ರಾಹಿಮ್ ಕಾರ್ನಾಡ್ ಅವರ ಸಹಕಾರದಲ್ಲಿ ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗು ಸ್ಥಳೀಯ ಆಡಳಿತದ ಕಾರ್ಯವಿಧಾನ ಕಾನೂನುಗಳನ್ನು ಪಾಲಿಸಿದ ಬಳಿಕ ಧಾರ್ಮಿಕ ವಿಧಿವಿಧಾನದೊಂದಿಗೆ ಮುಲ್ಕಿ ಬಳಿಯ ಕಾರ್ನಾಡು ದರ್ಗಾ ಪಕ್ಕದ ದಫನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಆಪತ್ಭಾಂಧವ ಆಶಿಫ್, ಅದ್ದಿ ಬೊಳ್ಳೂರು, ಮರ್ವಾನ್, ನವಾಝ್, ರಿಝ್ವಾನ್ ಹಾಗು ಮತ್ತಿತರರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ