
ಮಂಗಳೂರು: ಸುರತ್ಕಲ್‌ನ ಗುಡ್ಡೆ ಕೊಪ್ಲ ಕಡಲ ಕಿನಾರೆಗೆ ಪುತ್ತೂರು ಕಡೆಯಿಂದ ವಿಹಾರಕ್ಕೆ ಬಂದ ಯುವಕರು ಸ್ಥಳೀಯ ಮೊಗವೀರರ ಎಚ್ಚರಿಕೆಗೂ ಗಮನ ಕೊಡದೆ ಕಡಲಲ್ಲಿ ಈಜುತ್ತಿರುವಾಗ ಕಡಲ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿರುವಾಗ ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಯುವಕರನ್ನು ಕಡಲ ಮಧ್ಯದಲ್ಲಿ ಮುಳುಗಿದ್ದ ಡ್ರಜ್ಜರ್ ಕಡೆಗೆ ಸಮುದ್ರದ ಅಲೆ ಎಳೆದುಕೊಂಡು ಹೋಗಿದ್ದು ಈ ವೇಳೆ ಸಹಾಯಕ್ಕೆ ಅಂಗಲಾಚುತ್ತಿದ್ದಾಗ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಆಗಲಿ ಕರಾವಳಿ ರಕ್ಷಣಾ ಪಡೆಗಾಗಲಿ ಡ್ರಜ್ಜರ್ ಕಡೆಗೆ ಹೋಗಿ ಯುವಕನನ್ನು ರಕ್ಷಿಸಲು ಅಸಾಧ್ಯವಾದಾಗ ಸ್ಥಳೀಯ ವೀರಮೊಗವೀರ ಯುವಕರಾದ ಯಾದವ ಶ್ರೀಯಾನ್ ಮತ್ತು ಸುಮನ್ ರವರು ಈಜುತ್ತಾ ಡ್ರಜರ್ ಕಡೆಗೆ ಹೋಗಿ ಯುವಕನನ್ನು ಹಿಡಿದು ದಡಕ್ಕೆ ತಲುಪಿಸಿ ಬದುಕಿಸಿ ಸಾಹಸ ಮೆರೆದಿದ್ದಾರೆ. ಇವರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ