
ಮಂಗಳೂರು: ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಕಳಿಯ ಗ್ರಾ.ಪಂ. ನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ಮೇರೆಗೆ ಎಸಿಬಿ ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್ ಬಿ.ಸಿ. ತಂಡ ಶನಿವಾರ ದಾಳಿ ನಡೆಸಿ ದಾಖಲೆಗಳ ಪರೀಶೀಲನೆ ನಡೆಸಿದೆ.
ಗ್ರಾಮ ಲೆಕ್ಕಿಗ ಹಾಗೂ ಗ್ರಾ.ಪಂ. ಅಧ್ಯಕ್ಷರು ಸೇರಿ ಒಂದೇ ಕುಟುಂಬಕ್ಕೆ ಎರಡು, ಮೂರು 94C ಹಕ್ಕು ಪತ್ರ ನೀಡಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಮನೆ ನಿರ್ಮಾಣ ವಾಗದಿದ್ದರೂ ಹಕ್ಕು ಪತ್ರ ನೀಡಲಾಗಿದೆ ಎಂದು ದೂರಲಾಗಿತ್ತು. ಈ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹದ ದಳದ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್, ಶ್ಯಾಮ್ ಸುಂದರ್ , ಹರಿ ಪ್ರಸಾದ್, ಪ್ರಶಾಂತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ