
ಧರ್ಮಸ್ಥಳ: ಧರ್ಮಸ್ಥಳದ ಗ್ರಾಮದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ‘ಚಾತುರ್ಮಾಸ್ಯ ವ್ರತ ಕಾರ್ಯರಂಭ ಜು.10ರಂದು ಶ್ರೀ ಗುರುದೇವ ಮಠ ದೇವರಗುಡ್ಡೆಯಲ್ಲಿ ಜರುಗಿತು.

ಸಂಸ್ಥಾನದ ಆಸ್ಥಾನ ಪುರೋಹಿತರಾದ ಶ್ರೀ ಲಕ್ಷ್ಮೀಪತಿ ಗೋಪಾಲಚಾರ್‍ಯರು ಶ್ರೀ ಗುರುದೇವ ಮಠದಲ್ಲಿ ಸ್ವಾಮೀಜಿಗಳ ಆತ್ಮೋನ್ನತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ನಡೆದ ಧಾರ್ಮಿಕ ವಿಧಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎಂ.ಎಲ್.ಸಿ ಹರೀಶ್ ಕುಮಾರ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೇಶವ ಗೌಡ, ತಾ.ಪಂ. ಸದಸ್ಯೆ ಧನಲಕ್ಷ್ಮೀ, ಪೀತಾಂಬರ ಹೇರಾಜೆ, ಕೃಷ್ಣಪ್ಪ ಗುಡಿದಾರ್, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ವಿಟ್ಲ, ಕೃಷ್ಣಪ್ಪ ಪೂಜಾರಿ ಬಂಟ್ವಾಳ, ಚಿತ್ತರಂಜನ್ ಗರಡಿ ಮಂಗಳೂರು, ತುಕರಾಮ ಸಾಲ್ಯಾನ್, ಬಾಸ್ಕರ್ ಧರ್ಮಸ್ಥಳ, ರವೀಂದ್ರ ಪೂಜಾರಿ, ಕೇಶವ ಬಂಗೇರ ಗೇರುಕಟ್ಟೆ, ಸಂಪತ್ ಬಿ ಸುವರ್ಣ, ಶಶಿಧರ ಕಲ್ಮಂಜ, ಸುಜಾತ ಅಣ್ಣಿಪೂಜಾರಿ ಮೊದಲಾದವರು ಉಪಸ್ಥಿತರಿದ್ದರು
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ವಿಜೃಂಭಣೆಯಿoದ ನಡೆದ ಶ್ರೀ ಶಾರದಾ ಶತಮಾನೋತ್ಸವ